ಬಂಟ್ವಾಳ : ಮದುವೆಗೆ ಕೆಲವೇ ತಾಸುಗಳು ಬಾಕಿಯಿರುವಾಗ ವಧು ಮನೆ ಬಿಟ್ಟು ಹೋದ ಘಟನೆಯೊಂದು ಬಂಟ್ವಾಳದ ಬಿ.ಸಿ.ರೋಡಿನ ಪಲ್ಲಮಜಲು ಎಂಬಲ್ಲಿ ಸಂಭವಿಸಿದೆ. ಅಶ್ಪಿಯ (21) ನಾಪತ್ತೆಯಾದ ಯುವತಿಯಾಗಿದ್ದು, ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಡಿ.14ರಂದು ಅಶ್ಪಿಯಳ ಮದುವೆ ಬಂಟ್ವಾಳ ಬಿ ಮೂಡ ಗ್ರಾಮದ ಯುವಕನೊಂದಿಗೆ ನಿಶ್ಚಯವಾಗಿತ್ತು. ಹಿರಿಯರು ನಿಶ್ಚಯಿಸಿದ ಮದುವೆಗೆ ಎಲ್ಲ ತಯಾರಿ ಮುಗಿದಿತ್ತು. ಡಿ.14ರಂದು ಯುನಿಟಿ ಹಾಲ್‌ನಲ್ಲಿ ಮದುವೆ ನೆರವೇರಬೇಕಿತ್ತು. ಈ ನಡುವೆ ವಧು ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದಾಳೆ.
ಡಿ.14ರಂದು ನಸುಕಿನ 3.30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಗ್ಗೆ ಸುಮಾರು 4.30 ಗಂಟೆಗೆ ಬೆಳಗಿನ ಜಾವ ನೋಡಿದಾಗ ಅಕ್ಕನ ಮನೆಯಲ್ಲಿ ಇಲ್ಲದೇ ಇರುವುದು ತಿಳಿದು ಬಂದಿದೆ. ಬಳಿಕ ಎಲ್ಲ ಕಡೆ ಹುಡುಕಾಡಿದರೂ ಸಿಗದೆ ಇರುವುದರಿದ ದೂರು ನೀಡಿದ್ದಾರೆ. ಅಶ್ಪಿಯಳನ್ನು ಹುಡುಕಿ ಕೊಡಬೇಕಾಗಿ ವೃತ್ತಿಯಲ್ಲಿ ಚಾಲಕನಾಗಿರುವ ಅರ್ಶದ್ ಎಂಬವರು ನೀಡಿದ್ದಾರೆ.
























