ಎನ್ ಎಸ್ ಎಸ್ ಸೇವಾ ಸಂಗಮದ ದಶಮಾನೋತ್ಸವದ ಲೋಗೊ ಬಿಡುಗಡೆ

ಸುಳ್ಯ: ಎನ್ ಎಸ್ ಎಸ್ ಸೇವಾ ಸಂಗಮ ಟ್ರಸ್ಟ್ (ರಿ), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮವು ಜನವರಿ 2 ಮತ್ತು 3 ರಂದು ಮುಳ್ಯ ಅಟ್ಲೂರು ಶಾಲೆಯಲ್ಲಿ ನಡೆಯಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಲೋಗೊ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂತಮಂಗಲದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು ವಹಿಸಿದ್ದರು.

ಅತಿಥಿಗಳಾಗಿ ಗೌರವ ಸಲಹೆಗಾರ ಜಯಪ್ರಕಾಶ್ ಕಲ್ಲುಗದ್ದೆ, ಚಂದ್ರಶೇಖರ ಬಿಳಿನಲೆ, ಡಾ. ಅನುರಾಧ ಕುರುಂಜಿ, ಫಾಲಚಂದ್ರ ವೈ.ವಿ., ಶಾಲೆಯ ಮುಖ್ಯಗುರು ಸ್ನೇಹಲತಾ ಸೇವಾ ಸಂಗಮದ ರಕ್ಷಿತ್ ಬೊಳ್ಳೂರು, ಹೇಮಾನಾಥ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.





















































 
 

ಸುಜಿತ್ ಎಂ. ಎಸ್. ಸ್ವಾಗತಿಸಿ ಆಶಾ ಕೃಷ್ಣಾನಂದ ಅಂಬೆಕಲ್ಲು ವಂದಿಸಿದರು. ದೀಕ್ಷಿತ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top