ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್: ಗ್ಲೋ ಫೆಸ್ಟ್‌ಗೆ ಚಾಲನೆ

ಪುತ್ತೂರು: ಪ್ರತಿಷ್ಟಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ವಾರ್ಷಿಕ ವಜ್ರಾಭರಣಗಳ ಮಹೋತ್ಸವ ಗ್ಲೋಬಲ್ ಫೆಸ್ಟ್ ಇಂದಿನಿಂದ ಮುಂದಿನ ಒಂದು ತಿಂಗಳ ಕಾಲ ನಡೆಯಲಿದ್ದು, ಇಂದು ಚಾಲನೆ ದೊರೆತಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಅವರು ದೀಪ ಬೆಳಗಿಸಿ, ಮಹೋತ್ಸವಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಬಿ. ಆಚಾರ್ಯ ಮಾತನಾಡಿ, ಪ್ರಸ್ತುತ ಮಾರುಕಟ್ಟೆಯಲ್ಲಿ ನೈಜ ವಜ್ರಗಳು ಮತ್ತು ಲ್ಯಾಬ್ ತಯಾರಿತ ವಜ್ರಗಳು ಎಂಬ ಎರಡು ವಿಧಗಳಿವೆ. ಆದರೆ, ನಮ್ಮಲ್ಲಿ ಕೇವಲ ನೈಜ ವಜ್ರಗಳು ಮಾತ್ರ ಲಭ್ಯವಿವೆ. ಲ್ಯಾಬ್ ತಯಾರಿತ ವಜ್ರಗಳ ಬೆಲೆ ಕುಸಿಯುತ್ತಿದ್ದರೂ, ನೈಜ ವಜ್ರಗಳ ಮೌಲ್ಯವು ಸದಾ ಏರಿಕೆಯಾಗುತ್ತಲೇ ಇರುತ್ತದೆ. ಈ ಬಾರಿಯ ಉತ್ಸವದಲ್ಲಿ ಅತ್ಯುತ್ತಮ ವಜ್ರಾಭರಣಗಳ ಸಂಗ್ರಹದೊಂದಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದರು.





















































 
 

ಗ್ಲೋ ಫೆಸ್ಟ್‌ನಲ್ಲಿ ಸಂಸ್ಥೆಯು ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ 7000 ರೂ. ವರೆಗೆ ಸಂಸ್ಥೆ ರಿಯಾಯಿತಿ ನೀಡಲಿದೆ. ದುಬಾರಿ ಎಂದು ಖರೀದಿ ಮಾಡಲು ಹಿಂದೇಟು ಹಾಕುವವರಿಗೆ ‌ಕೈಗೆಟುಕುವ ದರದಲ್ಲಿ ವಜ್ರಾಭರಣಗಳು ಸಂಸ್ಥೆಯಲ್ಲಿ ಲಭ್ಯವಿದ್ದು, 3500 ರೂ. ಗಳಿಂದ ವಜ್ರಾಭರಣಗಳು ಲಭ್ಯವಿದೆ.

ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ಕೃಷ್ಟ ಶ್ರೇಣಿಯ ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಸಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ. ನುರಿತ ತಜ್ಞರಿಂದ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ, ಪ್ರತಿಷ್ಠಿತ ಪ್ರಮಾಣೀಕೃತ ಏಜೆನ್ಸಿಗಳಿಂದ ಧೃಡೀಕರಣಗೊಂಡ ವಜ್ರಾಭರಣಗಳ ಶ್ರೇಣಿ,ಪ್ರಮಾಣೀಕೃತ EF ಬಣ್ಣದ ಹಳೆಯ ವಜ್ರಾಭರಣಗಳ ವಿನಿಮಯ, ಮರುಖರೀದಿಯ ಗ್ಯಾರಂಟಿ, ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಗಳನ್ನು ತಮ್ಮದಾಗಿಸುವ ಸುವರ್ಣಾವಕಾಶವಿದೆ.

ವಜ್ರದ ಆಭರಣಗಳು ತಮ್ಮ ಅಸಾಧಾರಣ ಸೌಂದರ್ಯ ಹಾಗೂ ದೀರ್ಘಕಾಲ ಬಾಳಿಕೆಯಿಂದ ಬಹಳ ಅಮೂಲ್ಯ ಆಭರಣಗಳು ಎಂದು ಪರಿಗಣಿಸಲ್ಪಟ್ಟಿವೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಸುಮಾರು 3,600ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳು ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ-ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಈ ಆಫರ್ ತಮ್ಮ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top