ಅಮಲೇರಿದಾಗ ಬಸ್ಸನ್ನೇ ಕದ್ದುಕೊಂಡು ಹೋದ ಕುಡುಕರು!

ಜನ ಸಂಚಾರವಿಲ್ಲದ ಕಾರಣ ತಪ್ಪಿದ ಅನಾಹುತ

ಬೆಂಗಳೂರು : ಶರಾಬಿನ ಮತ್ತಿನಲ್ಲಿ ಬಸ್ಸನ್ನೇ ಕದ್ದುಕೊಂಡು ಹೋದ ಘಟನೆಯೊಂದು ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಬಸ್‌ ಚಲಾಯಿಸಿಕೊಂಡು ಪಲಾಯನ ಮಾಡಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ವ್ಯಕ್ತಿ ಮತ್ತು ರಸ್ತೆ ಬದಿಯ ವಿದ್ಯುತ್​​ ಕಂಬಗಳಿಗೆ ಬಸ್ ಡಿಕ್ಕಿಯಾಗಿ ಕುಡುಕುರು ಸಿಕ್ಕಿಬಿದ್ದಿದ್ದಾರೆ. ಘಟನೆ ನಿನ್ನೆ ರಾತ್ರಿ ​​ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಬಸ್‌ನ ಮುಂಭಾಗ ಜಖಂ ಆಗಿದ್ದು, ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.

ಚಾಲಕ ಎಂದಿನಂತೆ ಥಳಿರಸ್ತೆ ಬದಿ ಬಸ್ ಪಾರ್ಕ್ ಮಾಡಿ ಹೋಗಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಅಸಾಮಿಗಳು ಬಸ್ಸಿನ ವೈರ್ ಕಟ್ ಮಾಡಿ ಕದ್ದು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆದರೆ ನಿಯಂತ್ರಣ ಕಳೆದುಕೊಂಡ ಬಸ್​​ ಎರಡು ವಿದ್ಯುತ್​​ ಕಂಬಗಳು ಮತ್ತು ರಸ್ತೆಬಿದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಗುದ್ದಿದೆ. ಕೂಡಲೇ ಸಾರ್ವಜನಿಕರು ಬಸ್ ತಡೆದು ನಿಲ್ಲಿಸಿದ್ದು, ಈ ವೇಳೆ ಮೂವರು ಎಸ್ಕೇಪ್ ಆಗಿದ್ದಾರೆ. ಸಿಕ್ಕಿಬಿದ್ದ ಓರ್ವನನ್ನು ಥಳಿಸಲಾಗಿದ್ದು, ಬಳಿಕ ಆರೋಪಿಯನ್ನು ಆನೇಕಲ್ ಪೊಲೀಸರ ವಶಕ್ಕೆ ನೀಡಲಾಗಿದೆ.





















































 
 
error: Content is protected !!
Scroll to Top