ಜಾತಕ ತೋರಿಸಲು ಬಂದ ಯುವತಿಯ ಬೆನ್ನುಬಿದ್ದ ಜ್ಯೋತಿಷಿ!

ಮದುವೆಯಾಗುವಂತೆ ಒತ್ತಾಯಿಸಿ ಮಾಟಮಂತ್ರ ಮಾಡಿದ ಜ್ಯೋತಿಷಿಯನ್ನು ಬಂಧಿಸಿದ ಪೊಲೀಸರು

ಬೆಳ್ತಂಗಡಿ: ಜಾತಕ ತೋರಿಸಲು ಬಂದ ಯುವತಿಯೋರ್ವಳ ಹಿಂದೆ ಬಿದ್ದ ಜ್ಯೋತಿಷಿಯೊಬ್ಬ ಯುವತಿಗೆ ಮದುವೆಯಾಗುವಂತೆ ನಿರಂತರ ಕಿರುಕುಳ ನೀಡಿದ್ದಲ್ಲದೆ ಅವರ ಮನೆಗೆ ತೆರಳಿ ವಾಮಾಚಾರ ಮಾಡಿದ್ದು ಈ ಬಗ್ಗೆ ಪೊಲೀಸರಿಗೆ ಮನೆಯವರು ದೂರು ನೀಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ನಡೆದಿದೆ.

ಮೂಲತಃ ಶಿರಸಿ ಮೂಲದವನಾದ, ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ ಶೇಷಾದ್ರಿ ಎಂಬಾತನೇ ಆರೋಪಿ ಜ್ಯೋತಿಷಿಯಾಗಿದ್ದಾನೆ. ಸಂತ್ರಸ್ತ ಯುವತಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದು ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.





















































 
 

ತೆಕ್ಕಾರಿನ ಯುವತಿಯೊಬ್ಬಳ ಜಾತಕ ಪರಿಶೀಲಿಸಲು ಹಾಗೂ ದೇವಸ್ಥಾನದಲ್ಲಿ ಹಾಲು ಪಾಯಸ ಸೇವೆ ಕೊಡಲೆಂದು ಆಕೆಯ ಮನೆಯವರು ಶೇಷಾದ್ರಿ ಬಳಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಈತ ಯುವತಿಗೆ ಯಾರೋ ಮಾಟಮಂತ್ರ ಮಾಡಿದ್ದಾರೆ ಎಂದು ಹೇಳಿ ಏನೋ ಸೇವೆ ಮಾಡಿದ್ದ. ಇದಾದ ಬಳಿಕ ಈತ ನೇರವಾಗಿ ಯುವತಿಯ ಮನೆಯವರನ್ನು ಸಂಪರ್ಕಸಿ ಆಕೆಯ ದೋಷ ಪರಿಹಾರಕ್ಕಾಗಿ ಕೆಲವೊಂದು ಪೂಜೆ ಮಾಡಬೇಕಿದೆ ಎಂದು ಹೇಳಿದ್ದ. ಇದಾದ ಬಳಿ ಆತ ಯುವತಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಮನೆಯವರಲ್ಲಿ ಒತ್ತಾಯಿಸಿದ್ದ ಆದರೆ ಮನೆಯವರು ಹಾಗೂ ಯುವತಿ ಇದನ್ನು ನಿರಾಕರಿಸಿದ್ದಾರೆ.

ಆದರೂ ಬೆನ್ನು ಬಿಡದ ಆರೋಪಿ ಶೇಷಗಿರಿ ಭಟ್ ಯುವತಿಗೆ ನಾನಾ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ಯುವತಿಯ ಮನೆಯವರು ಆರೋಪಿಸಿದ್ದಾರೆ ಯಾವರೀತಿ ಹೇಳಿದರೂ ಬೆನ್ನು ಬಿಡದ ಈತ ಇವರ ಮನೆಯ ಕೊಟ್ಟಿಗೆಗೆ ಬೆಂಕಿ ಹಚ್ಚಿಯೂ ಹೋಗಿದ್ದ ಎಂದು ಸಂತ್ರಸ್ತೆಯ ಮನೆಯವರು ಆರೋಪಿಸಿದ್ದಾರೆ. ಬೆಂಕಿ ಹಚ್ಚಿದ ಬಗ್ಗೆ ಯುವತಿ ಮನೆಯವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಆದರೂ ಬೆನ್ನು ಬಿಡದ ಆರೋಪಿ, ಶೇಷಾದ್ರಿ ಮಧ್ಯರಾತ್ರಿಯ ವೇಳೆ ತಮ್ಮ ಮನೆಗೆ ಆಗಮಿಸಿ ಯಾರ ಅರಿವಿಗೂ ಬಾರದಂತೆ ಮಾಟಮಂತ್ರಗಳ ಪ್ರಯೋಗ ಮಾಡಿದ್ದಾನೆ. ಈ ದೃಶ್ಯ ಮನೆಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಶೇಷಗಿರಿ ಭಟ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

error: Content is protected !!
Scroll to Top