ಮೈಸೂರು: ಐತಿಹಾಸಿಕ ಮೈಸೂರು ಅರಮನೆಯ ವರಾಹ ಗೇಟ್ ಬಳಿ ಮುಖ್ಯದ್ವಾರದ ಮೇಲ್ಛಾವಣೆಯ ಸಣ್ಣ ಭಾಗವೊಂದು ಮುರಿದಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ಗೇಟಿನ ಮೇಲ್ಭಾಗದ ಸಣ್ಣ ಪ್ರಮಾಣದ ಚಾವಣಿ ಕುಸಿದು ಬಿದ್ದಿದ್ದು, ಆ ಸಂದರ್ಭದಲ್ಲಿ ಗೇಟಿನ ಸಮೀಪ ಸಾರ್ವಜನಿಕರ್ಯಾರೂ ಇರದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.
ಆದರೆ ಕುಸಿತಕ್ಕೆ ಒಳಗಾದ ಭಾಗವು ಸಿಬ್ಬಂದಿಯೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ಕೂಡಲೇ ಅರಮನೆಯ ಸಿಬ್ಬಂದಿ ಎಚ್ಚೆತ್ತು ಸ್ಥಳದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
























