ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಹತ್ತು ಮಂದಿಗೆ ಜೈಲು ಶಿಕ್ಷೆ

ನಕಲಿ ಆಧಾರ್‌ ಕಾರ್ಡ್‌ ಬಳಸಿ ಅಕ್ರಮವಾಗಿ ವಾಸ

ಉಡುಪಿ : ಅಕ್ರಮವಾಗಿ ನೆಲೆಸಿದ್ದ 10 ಬಾಂಗ್ಲಾದೇಶದ ಪ್ರಜೆಗಳಿಗೆ ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯ ತಲಾ 10,000 ರೂ. ದಂಡದೊಂದಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಕ್ಟೋಬರ್ 11, 2024ರಂದು ಮಲ್ಪೆಯ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ ಗಸ್ತು ತಿರುಗುತ್ತಿದ್ದ ಮಲ್ಪೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಆರ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಏಳು ಜನರನ್ನು ಗಮನಿಸಿದಾಗ ಅವರು ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ 7 ಜನರ ಗುಂಪು ಭಾರತದಲ್ಲಿ ತಮ್ಮ ವಾಸ್ತವ್ಯಕ್ಕೆ ಅನುಮತಿ ನೀಡುವ ಯಾವುದೇ ಪೌರತ್ವದ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾಗಿತ್ತು.

ತನಿಖೆ ವೇಳೆ ಆರೋಪಿಗಳು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದು, ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಪಡುತೋನ್ಸೆ ಗ್ರಾಮದ ಹೂಡೆಯಲ್ಲಿ ವಾಸಿಸುತ್ತಿರುವುದು ತಿಳಿದುಬಂದಿದೆ. ಐಪಿಸಿ, ವಿದೇಶಿಯರ ಕಾಯಿದೆ ಮತ್ತು ಆಧಾರ್ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 138/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.





















































 
 

ನಂತರದ ಇನ್ನೂ ಮೂವರು ಅಕ್ರಮ ವಲಸಿಗರನ್ನು ಬಂಧಿಸಲಾಗಿತ್ತು. ಹೀಗೆ ಒಟ್ಟು ಆರೋಪಿಗಳ ಸಂಖ್ಯೆ 10ಕ್ಕೆ ಏರಿತು. ನ್ಯಾಯಾಲಯ ಡಿಸೆಂಬರ್ 8 ರಂದು ಎಲ್ಲ 10 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿ, ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದೆ.

error: Content is protected !!
Scroll to Top