ನಿಷೇಧಿತ ಡ್ರಗ್ಸ್ ಮಾರಾಟ: ಮೂವರ ಬಂಧನ

ತಲಪಾಡಿ: ನಿಷೇಧಿತ ಮಾದಕ ವಸ್ತು MDMA ಅನ್ನು ಕೇರಳ ಮತ್ತು ಕರ್ನಾಟಕದ ಗಡಿ ಭಾಗ ತಚ್ಚಣಿಯಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ, ಅವರಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ತಲಪಾಡಿಯ ಕೊಲಂಗೆರೆ ನಿವಾಸಿ ಅಬ್ದುಲ್ ರವೂಫ್, ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಶರೀಫ್ ಯಾನೆ ಅಮಿನ್ ಮತ್ತು ಡ್ರಗ್ಸ್ ಖರೀದಿಗೆ ಬಂದಿದ್ದ ಕಿನ್ಯಾದ ‌ಸಂಕೇಶ್ ಹೌಸ್ ನಿವಾಸಿ ನಿಯಾಝ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಪಣಂಬೂರಿನ ಬೆಂಗ್ರೆ ‌ನಿವಾಸಿ ಸಲಾಂ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಬಂಧಿತರಿಂದ ಟೊಯೋಟಾ ಗ್ಲಾಂಝಾ ಕಾರು, ಮೂರು ಮೊಬೈಲ್‌ಗಳು, 2,500 ರೂ., ತೂಕ ಮಾಪನ, ಝಿಪ್‌ಲಾಕ್ ಕವರ್ ಮೊದಲಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





















































 
 
error: Content is protected !!
Scroll to Top