ಪಡುಕುತ್ಯಾರಿನಲ್ಲಿ ತಾಳಮದ್ದಳೆ ಸಪ್ತಾಹ ಸಮಾರೋಪ

ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪಡುಕುತ್ಯಾರು ಶ್ರೀ ವಿಶ್ವಕರ್ಮ ಕಲಾವೇದಿಕೆಯಲ್ಲಿ ದಶಂಬರ ಒಂದರಿಂದ ಏಳರವರೆಗೆ ವಾಲಿಮೋಕ್ಷ,ಶ್ರೀ ಕೃಷ್ಣ ತುಲಾಭಾರ, ಶ್ರೀ ಕೃಷ್ಣ ಸಂಧಾನ, ಜಾಬಲಿ ನಂದಿನಿ, ಬೀಷ್ಮ ವಿಜಯ, ಸುಧನ್ವ ಮೋಕ್ಷ, ಭೀಷ್ಮಾರ್ಜುನ ತಾಳಮದ್ದಳೆಯು ಹವ್ಯಾಸಿ ಮತ್ತು ಅತಿಥಿ ಕಲಾವಿದರಿಂದ ಸಂಪನ್ನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅನಂತ ಶ್ರೀ ಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರು ತಾಳಮದ್ದಳೆಯ ಪ್ರಾಯೋಜಕರನ್ನು ಗೌರವಿಸಿ ಮಾತಿನ ಮೂಲಕ ಪುರಾಣದ ಸಂದೇಶಗಳನ್ನು ಪಾತ್ರಗಳ ಮೂಲಕ ನಿರೂಪಿಸುವ ಕಲಾವಿದರ ಪ್ರತಿಭೆ ಅನನ್ಯವಾದದ್ದು. ಇದನ್ನು ಆಸ್ವಾದಿಸಲು ಪ್ರೇಕ್ಷಕರು ಮತ್ತು ಕಲಾಪೋಷಕರ ಸಹಕಾರ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ತಿಳಿಸಿದರು.

ಬಳಿಕ ಜರಗಿದ ಭೀಷ್ಮಾರ್ಜುನ ತಾಳಮದ್ದಳೆಯಲ್ಲಿ ಭಾಗವತರಾಗಿ ಮೋಹನ ಕಲಂಬಾಡಿ ಹಿಮ್ಮೇಳದಲ್ಲಿ ವಿಕಾಸ್ ಕಾರ್ಕಳ ಅಶೋಕ್ ಉಳೇಪಾಡಿ ಅರ್ಥದಾರಿಗಳಾಗಿ ರಾಧಾಕೃಷ್ಣ ಕಲ್ಚಾರ್ (ಭೀಷ್ಮ )ಪವನ್ ಕಿರಣ್ ಕೆರೆ (ಶ್ರೀ ಕೃಷ್ಣ )ದಿವಾಕರ ಆಚಾರ್ಯ ಗೇರುಕಟ್ಟೆ (ಅರ್ಜುನ) ಭಾಗವಹಿಸಿದ್ದರು.





















































 
 

ಸರಸ್ವತಿ ಪೀಠದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರ್, ಎಸೆಟ್ ಕಾರ್ಯದರ್ಶಿ, ಗುರುರಾಜ್ ಕೆ ಮಂಗಳೂರು, ಕಲಾ ಪೋಷಕ ಜಿ.ಟಿ ಆಚಾರ್ಯ ಮುಲ್ಕಿ, ಹರೀಶ್ ಆಚಾರ್ಯ ಕಾಂಜಾರ ಕಟ್ಟೆ, ಬದ್ರಿನಾಥ ಸನಿಲ್ ಕಟಪಾಡಿ, ಪುರುಷೋತ್ತಮ ಆಚಾರ್ಯ ಪುತ್ತೂರು, ರಾಘವೇಂದ್ರ ಆಚಾರ್ಯ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.ತಾಳಮದ್ದಳೆಯ ಸಂಯೋಜಕರಾದ ಕಾಪು ಜನಾರ್ದನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top