ನಿರ್ಮಲಾ ಸೀತಾರಾಮನ್‌ಗೆ ಏಕವಚನ ಪ್ರಯೋಗ : ಸಿದ್ದರಾಮಯ್ಯ ವಿರುದ್ಧ ಅಶೋಕ್‌ ಕಿಡಿ

ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಯನ್ನು ಹೀಗೆ ಕರೆಯುತ್ತೀರಾ ಎಂದು ಪ್ರಶ್ನೆ

ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸಿದ್ದರಾಮಯ್ಯ ಏಕವಚನದಲ್ಲಿ ಸಂಬೋಧಿಸಿರುವುದು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಖಂಡನೆ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ? ಇದು ಮನುವಾದನಾ? ಅಥವಾ ಸಿದ್ದರಾಮಯ್ಯವಾದನಾ? ಅಥವಾ ರಾಹುಲ್ ಗಾಂಧಿವಾದನಾ? ಎಂದು ಅಶೋಕ್‌ ಆಕ್ರೋಶ‌ ಹೊರಹಾಕಿದ್ದಾರೆ.





















































 
 

ಇದನ್ನು ಪ್ರಶ್ನೆ ಮಾಡಿದರೆ, ತಮ್ಮದು ಗ್ರಾಮೀಣ ಭಾಷೆ, ತಾವು ಹಳ್ಳಿಯಿಂದ ಬಂದವರು ಎಂಬ ಬುರುಡೆ ಸಮಜಾಯಿಷಿ ಕೊಡಬೇಡಿ. ಇಂದಿರಾ ಗಾಂಧಿ ಅಥವಾ ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನು ಇದೇ ಭಾಷೆಯಲ್ಲಿ, ಇದೇ ಧಾಟಿಯಲ್ಲಿ “ಎಂಥವಳೋ ಅವಳು?” ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ? ಎಂದು ಸವಾಲ್‌ ಹಾಕಿದ್ದಾರೆ. ಮಹಿಳೆಯರನ್ನು ತುಚ್ಛವಾಗಿ ಕಾಣುವ ಕಾಂಗ್ರೆಸ್ ಪಕ್ಷದ ಈ ಕೀಳು ಮನಸ್ಥಿತಿಯನ್ನು ಕರ್ನಾಟಕದ ಸ್ವಾಭಿಮಾನಿ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಸುಳ್ಳುಬುರುಕ ಸಿಎಂ ಸಿದ್ದರಾಮಯ್ಯನವರೇ, ಸುಳ್ಳು ಹೇಳೋದಕ್ಕೂ ಒಂದು ಮಿತಿ ಬೇಡವೇ? ನುಡಿದಂತೆ ನಡೆದ ಸರ್ಕಾರ ಎಂದು ಕನ್ನಡಿಗರಿಗೆ ಇನ್ನೆಷ್ಟು ದಿನೇ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ವಂಚನೆ ಮಾಡುತ್ತೀರಿ? 2013-18ರಲ್ಲಿ ತಾವು ಕೊಟ್ಟ 162 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಹೇಳಿದ್ದೀರಿ. ಅಸಲಿಗೆ ನಿಮ್ಮ ಪ್ರಣಾಳಿಕೆಯಲ್ಲಿದ್ದ ಘೋಷಣೆಗಳು 162 ಅಲ್ಲ 173. ಅದರಲ್ಲಿ ಐದು ವರ್ಷಗಳಲ್ಲಿ ತಾವು ಈಡೆರಿಸಿದ್ದು ಕೇವಲ 38% ಅಂದರೆ 67 ಮಾತ್ರ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗ ತಮ್ಮ ಎರಡನೇ ಅವಧಿಯಲ್ಲಿ 2.5 ವರ್ಷಗಳು ಪೂರ್ಣವಾದ ನಂತರ ಕೊಟ್ಟ 134 ಭರವಸೆಗಳಲ್ಲಿ ಈಡೇರಿರುವುದು ಕೇವಲ 9 ಮಾತ್ರ. ಈ ಅಂಕಿಅಂಶಗಳು ನಾನು ಹೇಳುತ್ತಿರುವುದಲ್ಲ. ಸ್ವತಂತ್ರ ಸಂಸ್ಥೆಗಳು ಪ್ರಕಟ ಮಾಡಿರುವುದು ಮತ್ತು ಮಾಧ್ಯಮಗಳು ವರದಿ ಮಾಡಿರುವುದು. ಸುಳ್ಳುಗೇಡಿತನದಲ್ಲಿ ಯಾವುದಾದರೂ “ಲಂಡನ್ ಬುಕ್ ಆಫ್ ರೆಕಾರ್ಡ್” ಪ್ರಶಸ್ತಿ ಇದ್ದರೆ ಅದು ತಮಗೇ ಸಲ್ಲಬೇಕು. ಈ ಹಸಿ ಸುಳ್ಳುಗಳು, ನಯವಂಚನೆಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ, ನೆನಪಿಡಿ ಎಂದು ಅಶೋಕ್‌ ಟೀಕಿಸಿದ್ದಾರೆ.

error: Content is protected !!
Scroll to Top