ಇಲಿಪಾಷಾಣ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಿಸದೆ ಸಾವು

ಸುಳ್ಯ: ಗುತ್ತಿಗಾರಿನ ಯುವತಿಯೊಬ್ಬಳು ಕಳೆದ ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವನೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಚಿಕ್ಕುಳಿ ನಿವಾಸಿ ಶೇಷಪ್ಪ ಗೌಡ ಎಂಬವರ ಪುತ್ರಿ ಪೂಜಾ ಎಂಬಾಕೆಯೇ ಮೃತಪಟ್ಟ ಯುವತಿ.

ಈಕೆ ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವನೆ ಮಾಡಿ ಅಸ್ವಸ್ಥಳಾಗಿದ್ದಳು. ಆ ಬಳಿಕ ವಿಷಯ ತಿಳಿದು ಅವಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ.





















































 
 

ಮೃತ ಪೂಜಾಳು ತಂದೆ, ತಾಯಿ, ಸಹೋದರ, ಸಹೋದರಿ, ಬಂಧು ಮಿತ್ರರನ್ನು ಅಗಲಿದ್ದಾಳೆ.

error: Content is protected !!
Scroll to Top