ವ್ಯಕ್ತಿ ನಾಪತ್ತೆ: ದೂರು ದಾಖಲು

ಪುತ್ತೂರು: ವ್ಯಕ್ತಿಯೊಬ್ಬರು ನಾಪತ್ತೆಯಾದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ‌ವ್ಯಕ್ತಿಯನ್ನು ಕೈಯ್ಯೂರಿನ ಮಾಡಾವು ಉದ್ದೋಲೆ ನಿವಾಸಿ ದೀಕ್ಷಿತ್ ಕೆ. ಜೆ. (36) ಎಂದು ಗುರುತಿಸಲಾಗಿದೆ. ನ. 30 ರಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ನೀಡಿರುವ ದೂರಿನಲ್ಲಿ ‌ತಿಳಿಸಿದ್ದಾರೆ.

ದೀಕ್ಷಿತ್ ಗ್ರಾಫಿಕ್ ಡಿಸೈನರ್ ಆಗಿದ್ದು, ಕಳೆದೊಂದು ತಿಂಗಳಿನಿಂದ ತಮ್ಮ ಪತ್ನಿಯ ಮನೆಯಲ್ಲಿ ವಾಸವಿದ್ದರು. ನ. 30 ರಂದು ಮೈಸೂರಿನ ಮೂಲಕ ಬೆಂಗಳೂರಿಗೆ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಡಿ. 2 ರಂದು ರಾಮನಗರಕ್ಕೆ ತಲುಪಿರುವುದಾಗಿ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಡಿ. 3 ರ ಮಧ್ಯರಾತ್ರಿ ಪತ್ನಿಗೆ ಕರೆ ಮಾಡಿ ಬೆಂಗಳೂರು ತಲುಪಿದ್ದಾಗಿ ‌ತಿಳಿಸಿದ್ದು, ನನ್ನ ಆರೋಗ್ಯ ಸರಿ ಇಲ್ಲ. ಮೊಬೈಲ್ ಚಾರ್ಜ್ ಕಡಿಮೆ ಇದೆ. ಮತ್ತೆ ಕಲೆ ಮಾಡುವುದಾಗಿ ತಿಳಿಸಿದ್ದು, ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸ್ನೇಹಿತರಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.





















































 
 

ದೀಕ್ಷಿತ್ ಅವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

error: Content is protected !!
Scroll to Top