ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಖದೀಮರು

ಮಂಗಳೂರು: ದರೋಡೆಕೋರರು ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ನಡೆಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂತ್ರಸ್ಥ ಮಹಿಳೆ ಜಲಜಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಜಲಜಾ ಅವರು ಒಂಟಿಯಾಗಿ ವಾಸಿಸುತ್ತಿದ್ದು, ಡಿ. 3 ರ ಮಧ್ಯಾಹ್ನದ ವೇಳೆ ಇಬ್ಬರು ಯುವಕರು ನೀರು ಕೇಳುವ ನೆಪದಲ್ಲಿ ಅವರ ಮನೆಯ ಬಾಗಿಲು ಬಡಿದಿದ್ದಾರೆ. ಆಗ ಜಲಜ ಅವರು ನೀನು ಹೊರಗಡೆ ಇರುವುದಾಗಿ ತಿಳಿಸಿದ್ದಾರೆ.

ಕೆಲವು ಹೊತ್ತಲ್ಲೇ ಒಬ್ಬ ಯುವಕ ಮನೆಯ ಹಂಚನ್ನು ತೆಗೆದು ಮನೆಯೊಳಕ್ಕೆ ಬಂದಿದ್ದು, ಮನೆಯ ಮುಂಬಾಗಿಲು ತೆರೆದಿದ್ದಾನೆ. ಆಗ ಇನ್ನೊಬ್ಬನೂ ಮನೆಯೊಳಕ್ಕೆ ಪ್ರವೇಶಿಸಿದ್ದು ಜಲಜ ಅವರನ್ನು ರೂಮಿಗೆ ತಳ್ಳಿಕೊಂಡು ಹೋಗಿ ಬಟ್ಟೆಯೊಂದನ್ನು ಅವರ ಕತ್ತಿಗೆ ಸುತ್ತಿದ್ದು ಚಿನ್ನಾಭರಣ ಎಲ್ಲಿದೆ, ಬೊಬ್ಬೆ ಹೊಡೆದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಬಳಿಕ ಅವರ ಕಪಾಟು ತೆರೆದು ಅದರಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಸರ, ಬಳೆಗಳು ಮತ್ತು ಪರ್ಸ್‌ನಲ್ಲಿದ್ದ 14,000 ರೂ. ಗಳನ್ನು ದೋಚಿದ್ದಾರೆ. ಹಾಗೆಯೇ ಜಲಜ ಅವರ ಕಿವಿಯಲ್ಲಿದ್ದ ಓಲೆಗಳನ್ನು ಸಹ ಕದ್ದಿದ್ದಾರೆ. ಆ ಬಳಿಕ ಬೈಕಿನಲ್ಲಿ ಪರಾರಿಯಾಗಿದ್ದಾರೆ.





















































 
 

ಈ ಸಂಬಂಧ ಸಂತ್ರಸ್ಥೆ ಪೊಲೀಸರಿಗೆ ದೂರು ನೀಡಿದ್ದಾರೆ.

error: Content is protected !!
Scroll to Top