ಉಳ್ಳಾಲ: ಹದಿನಾರು ವರ್ಷದ ಹುಡುಗಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವೂರು ಇನೋಳಿ ಎಂಬಲ್ಲಿ ನಡೆದಿದೆ.
ಮೃತಳನ್ನು ಇನೋಳಿ ಕಾನ ನಿವಾಸಿ ಝೈನಾಜ್ ಎಂದು ಗುರುತಿಸಲಾಗಿದೆ.
ಮೃತ ಬಾಲಕಿ SSLC ಓದಿನ ಬಳಿಕ ಬ್ಯೂಟಿಷಿಯನ್ ಕೋರ್ಸ್‌ಗೆ ಸೇರಿಕೊಂಡಿದ್ದಳು. ಆದರೆ ಗುರುವಾರ ಅನಾರೋಗ್ಯದ ಕಾರಣ ಹೇಳಿ ಮನೆಯಲ್ಲೇ ಉಳಿದುಕೊಂಡಿದ್ದಳು. ತನ್ನ ಅಜ್ಜಿ ಹಾಗೂ ತಾಯಿ ಮನೆಯಲ್ಲಿಲ್ಲದ ಸಮಯ ನೋಡಿ ಈಕೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























