ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಶವವೊಂದು ಪಾಳು ಬಾವಿಯಲ್ಲಿ ಪತ್ತೆಯಾದ ಘಟನೆ ವಾಮದಪದವಿನಲ್ಲಿ ನಡೆದಿದೆ.
ಜನವಸತಿ ಇಲ್ಲದ ಪ್ರದೇಶದಲ್ಲಿ ಈ ಪಾಳು ಬಾವಿ ಇದ್ದು, ಇದರಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿರುವುದಾಗಿದೆ.
ಕಾಪಿಕಾಡ್ ನಿವಾಸಿ ಮನ್ವಿತ್ ಎಂಬವರ ತಂದೆಗೆ ಸೇರಿದ ನಿವೇಶನ ಇದಾಗಿದ್ದು, ಇಲ್ಲಿ ಅಳತೆ ನಡೆಸುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೆಲಸದಾಳುಗಳಿಂದ ಮಾಡಿಸುತ್ತಿದ್ದರು. ಈ ಸಂದರ್ಭದಲ್ಲಿ ಮೃತದೇಹ ಪತ್ತೆಯಾಗಿರುವುದಾಗಿದೆ.
ಸುಮಾರು 50 – 60 ವರ್ಷದ ವ್ಯಕ್ತಿಯ ಮೃತದೇಹ ಇದಾಗಿದ್ದು, ಪುಂಜಾಲಕಟ್ಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
























