ರೈಲ್ವೆ ಹೆಡ್ ಟಿಇಟಿ ರಾಘವೇಂದ್ರ ಶೆಟ್ಟಿ ಅವರ ಸಮಯಪ್ರಜ್ಞೆಯಿಂದ ಮತ್ತೆ ಮನೆ ಸೇರಿದ ವಿದ್ಯಾರ್ಥಿ

ಉಡುಪಿ: ನಗರದ ಬೋರ್ಡಿಂಗ್ ಹಾಸ್ಟೆಲ್ ‌ನಿಂದ ಕಾಣೆಯಾಗಿದ್ದ 13 ವರ್ಷದ ಹುಡುಗನನ್ನು ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ರೈಲ್ವೆ ಮಂಗಳೂರು ವಿಭಾಗದ ಮುಖ್ಯ ಟಿಇಟಿ ರಾಘವೇಂದ್ರ ಶೆಟ್ಟಿ ಅವರು ಸುರಕ್ಷಿತವಾಗಿ ರಕ್ಷಿಸಿದ ಘಟನೆ ನಡೆದಿದೆ.

ರೈಲಿನಲ್ಲಿ ಬಾಲಕ ಒಬ್ಬನೇ ಪ್ರಯಾಣ ನಡೆಸುತ್ತಿದ್ದು, ಆತನ ನಡೆಯಲ್ಲಿ ಸಂದೇಹ ಕಂಡುಬಂದಿದೆ. ಹಾಗಾಗಿ ರಾಘವೇಂದ್ರ ಶೆಟ್ಟಿ ಅವರು ಬಾಲಕನ ಬ್ಯಾಗ್ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಆತನ ಶಾಲೆಯ ಐಡಿ ಕಾರ್ಡ್ ದೊರೆತಿದೆ.

ತಕ್ಷಣವೇ ಶಾಲೆಯ ಅಧಿಕಾರಿಗಳನ್ನು ಸಂಪರ್ಕಿಸಿದ ಅವರು ಬಾಲಕನ ಬಗ್ಗೆ ವಿಚಾರಿಸಿದ್ದು, ಆತ ಓಡಿ ಹೋಗಿರುವುದು ತಿಳಿದು ಬಂದಿದೆ. ಆ ಬಳಿಕ ಶಾಲೆಗೆ ನಡೆದ ಘಟನೆಯ ಬಗ್ಗೆ ವಿವರಿಸಲಾಗಿದೆ. ಬಾಲಕ ತಾಯಿಯ ಜೊತೆ ವಾಸಿಸುತ್ತಿದ್ದು, ಮನೆಗೆಲಸ ಮಾಡಿ ಆತನನ್ನು ಸಾಕುತ್ತಿದ್ದರು. ಆತನ ಸುರಕ್ಷತೆಯ ಬಗ್ಗೆ ತಾಯಿಗೂ ಮಾಹಿತಿ ನೀಡಲಾಗಿದೆ.





















































 
 

ಬಾಲಕನನ್ನು ಉಡುಪಿ ನಿಲ್ದಾಣದಲ್ಲಿ ಆರ್‌ಪಿಎಫ್ ವಶಕ್ಕೆ ಒಪ್ಪಿಸಲಾಗಿದೆ. ಅಲ್ಲಿಂದ ಬಾಲಕನನ್ನು ಆತನ ಮನೆಗೆ ಕಳುಹಿಸಲಾಗಿದೆ.

ರಾಘವೇಂದ್ರ ಶೆಟ್ಟಿ ಅವರ ಸಮಯಪ್ರಜ್ಞೆಗೆ ರೈಲ್ವೆ ಅಧಿಕಾರಿಗಳು ಶ್ಲಾಘಿಸಿದ್ದಾರೆ.

error: Content is protected !!
Scroll to Top