ಬೆಳ್ತಂಗಡಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ದುರಂತ ಅಂತ್ಯ ಕಂಡ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ಮುಹಮ್ಮದ್ ಹಝೀರಿನ್ ಎಂದು ಗುರುತಿಸಲಾಗಿದೆ.
ಹಝೀರಿನ್ ತನ್ನ ಅಜ್ಜನ ಜೊತೆಗೆ ತಿಂಡಿ ತರಲೆಂದು ತೆರಳಿದ್ದ. ಅಜ್ಜನ ಕೈ ತಪ್ಪಿಸಿ ಹಿಂದಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಮಗುವಿಗೆ ಕಾರು ಢಿಕ್ಕಿ ಹೊಡೆದಿದೆ. ಈ ಅಪಘಾತದಿಂದ ಮಗು ದೂರಕ್ಕೆ ಎಸೆಯಲ್ಪಟ್ಟಿದ್ದು ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಗು ಮೃತಪಟ್ಟಿದೆ.
ಕಾರು ಚಾಲಕನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದೆ.
























