ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಪೋಕ್ಸೋ ಆರೋಪಿಯ ಬಂಧನ

ಕಾಸರಗೋಡು: ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪೋಕ್ಸೋ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನೆಕ್ರಾಜೆ ಕೊರೆಕ್ಕಾನದ ಅಶ್ವಥ್(19) ಎಂಬವನೇ ಪರಾರಿಯಾಗಿದ್ದ ಆರೋಪಿ. ಪೊಲೀಸರ ಕಸ್ಟಡಿಯಲ್ಲಿದ್ದ ಈತ ಕೆಲಕಾಲ ತಪ್ಪಿಸಿಕೊಂಡಿದ್ದು, ಆತನನ್ನು ಆನೆಬಾಗಿಲು ಬಳಿಯ ಪೊದೆಯೊಂದರಿಂದ ಮತ್ತೆ ಬಂಧಿಸಲಾಗಿದೆ.

ಕಾಸರಗೋಡು ನಗರ ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಈತ ಪರಾರಿಯಾಗಿದ್ದ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





















































 
 
error: Content is protected !!
Scroll to Top