ಎವಿಜಿ ಶಾಲೆಯಲ್ಲಿ ಸ್ಕೌಟ್- ಗೈಡ್ ,ಕಬ್ – ಬುಲ್ ಬುಲ್, ಬನ್ನಿ ತಂಡಗಳ ಉದ್ಘಾಟನೆ

ಪುತ್ತೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಸ್ಕೌಟ್- ಗೈಡ್, ಕಬ್ -ಬುಲ್ ಬುಲ್, ಬನ್ನಿ ತಂಡಗಳ ಉದ್ಘಾಟನಾ ಸಮಾರಂಭವು ದಿನಾಂಕ 4.12.2025 ರಂದು ನಡೆಯಿತು.
ಆರಂಭದಲ್ಲಿ ಸ್ಕೌಟ್ ಧ್ವಜವನ್ನು ಅರಳಿಸುವ ಮೂಲಕ ಕಾರ್ಯಕ್ರಮವು ಆರಂಭಗೊಂಡಿತು. ಭಾರತ ಸ್ಕೌಟ್ ಗೈಡ್ ನ ಪುತ್ತೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇ. ಫಾ. ವಿಜಯ ಹಾರ್ವಿನ್ ರವರು ದೀಪ ಬೆಳಗಿಸಿ , ಬ್ಯಾಜ್ ನೀಡಿ ,ಸ್ಕಾರ್ಫ್ ತೊಡಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಇದೊಂದು ಅಂತರಾಷ್ಟ್ರೀಯ ಸಂಸ್ಥೆ. ಇದರಲ್ಲಿ ಸದಸ್ಯರು ಆಗುವುದು ಹೆಮ್ಮೆಯ ಸಂಗತಿ. ಕೇವಲ ಸದಸ್ಯರಾಗದೆ ಅದರ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ತಮ್ಮನ್ನು ತಾವು ವಿಕಸನಗೊಳಿಸುವ ಮೂಲಕ ಮನೆಗೆ ,ಶಾಲೆಗೆ, ಊರಿಗೆ ಹಾಗೂ ರಾಷ್ಟ್ರಕ್ಕೆ ಸಂಪತ್ತುವಾಗಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾರತ ಸ್ಕೌಟ್ ಗೈಡ್ ನ ಪುತ್ತೂರು ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿ, ಶ್ರೀಮತಿ ಸುನಿತಾ . ಎಂ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಬಗ್ಗೆ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆಯಲು ಈ ಆಂದೋಲನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.ಹಾಗೂ ಕಾರ್ಯಕಾರಿ ಸಮಿತಿಯ ಸಹ ಕಾರ್ಯದರ್ಶಿ ಶ್ರೀಮತಿ ಮೆಬೆಲ್ ಡಿಸೋಜಾ ಸಂದರ್ಭೋಚಿತವಾಗಿ ಮಾತನಾಡಿ ಶಾಲೆ ಮತ್ತು ಆಡಳಿತ ಮಂಡಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿ ಮಕ್ಕಳು ಓದು- ಬರಹದೊಂದಿಗೆ ಶಿಸ್ತನ್ನು ಮೈಗೂಡಿಸಬೇಕು, ಒಮ್ಮೆ ಸ್ಕೌಟ್ ಆದವನು ಜೀವನಪೂರ್ತಿ ಸ್ಕೌಟ್ ಆಗುತ್ತಾನೆ. ಆ ಮೂಲಕ ಜೀವನದ ಪ್ರತಿ ರಂಗದಲ್ಲಿಯೂ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆ ವಹಿಸಿದ್ದು, ಅವರು ಮಾತನಾಡಿ ಸ್ಕೌಟ್- ಗೈಡ್ ಪುತ್ತೂರು ಸ್ಥಳೀಯ ಸಂಸ್ಥೆ ಗೆ ಕೃತಜ್ಞತೆ ಸಲ್ಲಿಸಿ ಮಕ್ಕಳಿಗೂ ,ಪೋಷಕರಿಗೂ ಧನ್ಯವಾದ ಹೇಳಿ ಮಕ್ಕಳ ಭವಿಷ್ಯ ಬೆಳಗಲಿ ಎಂದು ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಶ್ರೀ ಎ.ವಿ ನಾರಾಯಣ ರವರು ಪ್ರಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಯ ಅನೇಕ ಕಾರ್ಯ ಚಟುವಟಿಕೆಗಳಿಗೆ ಇದೊಂದು ಹೊಸ ಸೇರ್ಪಡೆಯಾಯಿತು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.





















































 
 

ವೇದಿಕೆಯಲ್ಲಿ ಆಡಳಿತ ಅಧಿಕಾರಿಯಾದ ಶ್ರೀ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು, ರಕ್ಷಕ- ಶಿಕ್ಷಕ ಸಂಘದ ಅಧ್ಯಕೆ ಶ್ರೀಮತಿ ಸೌಮ್ಯಶ್ರೀ ಹೆಗಡೆ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಅಮರ್ ನಾಥ್ ಪಟ್ಟೆ, ಹಾಗೂ ಸ್ಕೌಟ್ ಗೈಡ್ ,ಕಬ್, ಬುಲ್ ಬುಲ್ ,ಬನ್ನಿ ತರಬೇತಿ ಪಡೆದ ಶಿಕ್ಷಕಿಯರಾದ ಶ್ರೀಮತಿ ಸುಚಿತ, ಶ್ರೀಮತಿ ರೀಮಾ ಲೋಬೋ ,ಶ್ರೀಮತಿ ಯಶುಭ ರೈ ಹಾಗೂ ಶ್ರೀಮತಿ ಹರ್ಷಿತ ಉಪಸ್ಥಿತರಿದ್ದರು.
ಸ್ಕೌಟ್- ಗೈಡ್,ಬುಲ್ ಬುಲ್, ಬನ್ನಿ ವಿದ್ಯಾರ್ಥಿಗಳಿಂದ ನೃತ್ಯ, ಸ್ಕಿಟ್ ಮತ್ತು ಸ್ಕೌಟ ನ ತತ್ವ ,ಕಾನೂನು ಪ್ರತಿಜ್ಞೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಸ್ಕೌಟ್ ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಸುಚಿತ ಸ್ವಾಗತಿಸಿ, ಶ್ರೀಮತಿ ರೀಮಾ ಲೋಬೋ ವಂದನಾರ್ಪಣೆಗೈದು, ಶ್ರೀಮತಿ ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

ಪೋಷಕರು ,ಆಡಳಿತ ಮಂಡಳಿ ನಿರ್ದೇಶಕರು ಬೋಧಕ- ಬೋಧಕೇತರ ವೃಂದ ,ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

error: Content is protected !!
Scroll to Top