ಪುತ್ತೂರು: ಭಾನುವಾರ ನಾಪತ್ತೆಯಾಗಿದ್ದ ನಗರದ ಪಡೀಲ್ನ ಚಿಕನ್ ಅಂಗದಿಯ ನೌಕರ ಬದ್ರುದ್ದೀನ್ ಡಿ.ಕೆ (29) ಎಂಬವರ ಮೃತದೇಹ ಸೇಡಿಯಾಪು ಬಳಿಯ ಕಾಡಿನಲ್ಲಿ ಸೋಮವಾರ ಪತ್ತೆಯಾಗಿದೆ. ಆರ್ಥಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.
ಕಾಣೆಯಾದ ಒಂದು ದಿನದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬದ್ರುದ್ದೀನ್ ಅವಿವಾಹಿತರಾಗಿದ್ದು, ತಾಯಿ, ಅಣ್ಣ, ಅಕ್ಕ, ತಮ್ಮ ಹಾಗೂ ತಂಗಿಯನ್ನು ಅಗಲಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
























