ದಂಪತಿ ಜಗಳ: ಗಂಡ ಆತ್ಮಹತ್ಯೆ

ಕಾರ್ಕಳ: ದಂಪತಿ ಮಧ್ಯೆ ನಡೆದ ಜಗಳ ಪತಿಯ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ನಿಟ್ಟೆಯಲ್ಲಿ ನಡೆದಿದೆ.

ಪೋಸ್ಟ್‌ಮ್ಯಾನ್ ಒಬ್ಬರು ದಂಪತಿ ಮನೆಗೆ ಪತ್ರ ನೀಡಲು ಬಂದಿದ್ದಾಗ ಪತ್ನಿ ಶಕುಂತಲಾ ಅವರು ಗಾಯಗೊಂಡು ಕಂಡುಬಂದಿದೆ. ತಕ್ಷಣವೇ ಪೋಸ್ಟ್‌ಮ್ಯಾನ್ ಅವರು ಶಕುಂತಲಾ ಅವರ ಪುತ್ರ ಸಾಯಿಕಿರಣ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪುತ್ರ ಮನೆಗೆ ಬಂದು ತಾಯಿಯನ್ನು ವಿಚಾರಿಸಿದಾಗ ತಂದೆ ಕೋಲಿನಿಂದ ಹಲ್ಲೆ ಮಾಡಿರುವುದು ತಿಳಿದು ಬಂದಿದೆ.

ತಂದೆ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಬಾಗಿಲು ಬಡಿದರೂ ತೆರೆದಿಲ್ಲ. ಈ ವೇಳೆ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.





















































 
 

ಯಾವುದೋ ಕಾರಣಕ್ಕೆ ತಂದೆ ಮತ್ತು ತಾಯಿ ನಡುವೆ ಜಗಳ ನಡೆದಿದೆ. ತಾಯಿಗೆ ತಂದೆ ಕೋಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಆ ಬಳಿಕ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ಸಾಯಿಕಿರಣ್ ಅವರು ಮಾಹಿತಿ ನೀಡಿರುವುದಾಗಿದೆ.

error: Content is protected !!
Scroll to Top