ಅಯ್ಯಪ್ಪ ವ್ರತಧಾರಿ ‌ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ನಿರಾಕರಣೆ: ಪ್ರಾಂಶುಪಾಲರ ‌ವಿರುದ್ಧ ಹಿಂದೂಗಳ ಆಕ್ರೋಶ

ಚಿಕ್ಕಮಗಳೂರು: ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಕ್ಕೆ ಹಾಕಿರುವ ಘಟನೆ MESP ಕಾಲೇಜಿನಲ್ಲಿ ನಡೆದಿದೆ.

ಪ್ರಥಮ ಪಿಯುಸಿ ಮೂವರು ಅಯ್ಯಪ್ಪ ಮಾಲಾಧಾರಿ ‌ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಹೊರಕ್ಕೆ ಹಾಕಿದ್ದಾರೆ. ಮಾಲೆ ತೆಗೆದು ಕಾಲೇಜಿಗೆ ಪ್ರವೇಶಿಸುವಂತೆ ತಾಕೀತು ಮಾಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದ ಹಾಗೆಯೇ ಆಕ್ರೋಶಗೊಂಡ ಹಿಂದೂಗಳು, ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಕಾಲೇಜಿನ ಬಳಿಗೆ ಬಂದು ಹಿಂದೂ ವಿರೋಧಿ ನೀತಿ ಪ್ರದರ್ಶಿಸಿದ ಪ್ರಾಂಶುಪಾಲರನ್ನು ‌ತರಾಟೆಗೆ ತೆಗೆದುಕೊಂಡಿದ್ದಾರೆ. ಅಯ್ಯಪ್ಪ ವ್ರತದಲ್ಲಿರುವ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಮಾಲಾಧಾರಿಗಳನ್ನು ‌ಮಾಡುವ ಎಚ್ಚರಿಕೆಯನ್ನೂ ಕಾಲೇಜಿಗೆ ನೀಡಲಾಗಿದೆ.

ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಎಚ್ಚೆತ್ತ ಪ್ರಾಂಶುಪಾಲರು ಮೂವರು ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. ಆಡಳಿತ ಮಂಡಳಿಯ ಜೊತೆಗೆ ಚರ್ಚೆ ನಡೆಸಿ ಮುಂದಿನ ನಿರ್ಣಯ ಪ್ರಕಟಿಸುವುದಾಗಿ ‌ತಿಳಿಸಿದ್ದಾರೆ. ಹಾಗೆಯೇ ನಾವು ಸರ್ಕಾರ ಮತ್ತು ಆಡಳಿತ ಮಂಡಳಿಯ ಸೂಚನೆ ಪಾಲಿಸಿದ್ದೇವೆ. ಕಾಲೇಜಿಗೆ ಸಮವಸ್ತ್ರ ವಲ್ಲದೆ ಬೇರೆ ಉಡುಗೆಯಲ್ಲಿ ಬರುವಂತಿಲ್ಲ ಎಂಬ ನಿಯಮ ಇದೆ. ಅದನ್ನು ವಿದ್ಯಾರ್ಥಿಗಳಿಗೆ ಹೇಳಿದ್ದೇವಷ್ಟೇ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.





















































 
 

ಕಾಲೇಜಿಗೆ ಬಸವನಹಳ್ಳಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top