ಪುತ್ತೂರಿನ ಮೆಡಿಕಲ್ ಕಾಲೇಜು ಕನಸಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್

ಪುತ್ತೂರು: ತಾಲೂಕಿನ ಜನರಿಗೆ ಶುಭ ಸುದ್ದಿ ಎಂಬಂತೆ ಪುತ್ತೂರಿನ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಅಧಿಕೃತ ಮಾನ್ಯತೆ ದೊರಕಿದೆ. ಈ ಕಾರಣಕ್ಕೆ ಶಾಸಕ ಅಶೋಕ್ ರೈ ಅವರು ದೇವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ‌ಶಾಸಕರು, ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರಾತಿ ಆದೇಶ ಸಿಕ್ಕಿದೆ. ಹಾಗೆಯೇ 300 ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗೂ ಅನುಮೋದನೆ ದೊರೆತಿದೆ. ಸಿಎಂ ‌ಸಿದ್ದರಾಮಯ್ಯ ಅವರು ಶಿಲಾನ್ಯಾಸ, ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸರ್ಕಾರ ಪುತ್ತೂರಿನ ಮೆಡಿಕಲ್ ಕಾಲೇಜಿಗೆ ಅನುಮೋದನೆ ನೀಡಿದ ಆದೇಶ ಪ್ರಕಟವಾಗುತ್ತಿದ್ದ ಹಾಗೆಯೇ ಶಾಸಕರು ಎಲ್ಲಾ ಧರ್ಮಗಳ ದೇವಾಲಯ, ಪ್ರಾರ್ಥನಾಲಯಗಳಿಗೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.





















































 
 
error: Content is protected !!
Scroll to Top