ಅಡುಗೆ ಗ್ಯಾಸ್‌ ಬೆಲೆ ತುಸು ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರಸ್ತುತ ಕಡಿಮೆಯಾದ ಪರಿಣಾಮವಾಗಿ ಅದರ ಉಪಉತ್ಪನ್ನವಾದ ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್‌ಪಿಜಿ) ಬೆಲೆ ಸಹ ಕಡಿಮೆಯಾಗುತ್ತಿವೆ. ಹೀಗಾಗಿ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು ತುಸು ಕಡಿಮೆ ಮಾಡಿವೆ.

19 ಕೆಜಿ ವಾಣಿಜ್ಯ ಸಿಲಿಂಡರ್‌ ಬೆಲೆ 10 ರೂಪಾಯಿಗಳಷ್ಟು ಕಡಿಮೆ ಆಗಿದೆ. ಹೊಸ ಬೆಲೆ ಡಿಸೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಒಂದು ತಿಂಗಳ ಹಿಂದೆ, ಬೆಲೆಯನ್ನು 5 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿತ್ತು.

ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೆಯ ದಿನದಂದು LPG ಸಿಲಿಂಡರ್‌ಗಳ ಬೆಲೆಗಳನ್ನು ಪರಿಶೀಲಿಸುತ್ತವೆ. ಡಿಸೆಂಬರ್ ಮತ್ತು ನವೆಂಬರ್‌ನಲ್ಲಿ ಬೆಲೆಗಳು ಕುಸಿದಿವೆ. ಆದರೆ, ಈ ವರ್ಷದ ಅಕ್ಟೋಬರ್‌ನಲ್ಲಿ ಬೆಲೆಯನ್ನು 15.50 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಅದಕ್ಕೂ ಮೊದಲು, ನಿರಂತರ ಬೆಲೆ ಕಡಿತಗಳು ನಡೆದಿವೆ.





















































 
 

ಬೆಂಗಳೂರು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು ₹10ರಷ್ಟು ಕಡಿಮೆ ಮಾಡಲಾಗಿದೆ. ಈಗ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1,654.00 ರೂ. ಮೊದಲು ಇದರ ಬೆಲೆ ₹1664.00 ಆಗಿತ್ತು. ದೆಹಲಿಯಲ್ಲಿ ಬೆಲೆ ₹1580.50ಕ್ಕೆ ಇಳಿದಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್‌ನ ವಾಣಿಜ್ಯ ಸಿಲಿಂಡರ್‌ ಬೆಲೆ ಈಗ ₹1684.00 ಕ್ಕೆ ಇಳಿದಿದೆ. ಮುಂಬೈನಲ್ಲಿ ಇದು ಈಗ ₹1531.50 ಕ್ಕೆ ಲಭ್ಯವಿದ್ದರೆ, ಚೆನ್ನೈನಲ್ಲಿ ₹1739.50 ಕ್ಕೆ ಲಭ್ಯವಿರುತ್ತದೆ.

ಮನೆಗಳಲ್ಲಿ ಬಳಸುವ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮತ್ತೊಮ್ಮೆ ಬದಲಾಗದೆ ಉಳಿದಿದೆ. ಬೆಂಗಳೂರಿನಲ್ಲಿ ಇದರ ಬೆಲೆ ₹855.50 ಹಾಗೂ ದೆಹಲಿಯಲ್ಲಿ ಸಾಮಾನ್ಯ ಗ್ರಾಹಕರಿಗೆ ಇದರ ಬೆಲೆ ₹853 ಆಗಿದೆ. ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕೂಡ ಈ ಬೆಲೆಯನ್ನು ಅನುಸರಿಸುತ್ತವೆ.

error: Content is protected !!
Scroll to Top