ಜಮೀರ್‌ ಸೋಷಿಯಲ್‌ ಮೀಡಿಯಾ ಖಾತೆ ಸೌದಿಯಿಂದ ನಿರ್ವಹಣೆ : ಕುಟುಕಿದ ಬಿಜೆಪಿ

ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಎಂದು ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲ ವಿದೇಶಗಳಲ್ಲಿರುವುದು ಬಹಿರಂಗವಾದ ಬೆನ್ನಿಗೆ ಇದೀಗ ರಾಜ್ಯದ ಪ್ರಭಾವಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕೂಡ ಇದೇ ಆರೋಪಕ್ಕೆ ಸಿಲುಕಿದ್ದಾರೆ.

ಜಮೀರ್‌ ಅಹ್ಮದ್‌ ಖಾನ್‌ ಅವರ ಸೋಷಿಯಲ್‌ ಮೀಡಿಯಾ ಖಾತೆಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಈಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಜಮೀರ್‌ ಅವರನ್ನು ಕುಟುಕಿರುವ ಬಿಜೆಪಿ ಸೋಷಿಯಲ್‌ ಮೀಡಿಯಾ ಖಾತೆ ವಿದೇಶದಿಂದ ನಿರ್ವಹಣೆಯಾಗುತ್ತಿರುವದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಎಂದು ಪ್ರಶ್ನೆ ಮಾಡಿದೆ.





















































 
 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಮತ್ತು ಸದಾಕಾಲವೂ ಬರೀ ಮುಸಲ್ಮಾನರನ್ನು ಜಪಿಸುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗಳು ಸೌದಿ ಅರೇಬಿಯಾದಿಂದ ನಿರ್ವಹಣೆಯಾಗುತ್ತಿವೆ ಎಂದು ಆರೋಪಿಸಿದೆ.

ಜಮೀರ್ ಅಹ್ಮದ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗಳು ಸೌದಿ ಅರೇಬಿಯಾದಿಂದ ನಿರ್ವಹಣೆಯಾಗುತ್ತಿವೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರು ತಮ್ಮ ಇಲಾಖೆಯ ಖಚಿತ ಮತ್ತು ಅಧಿಕೃತ ಮಾಹಿತಿಗಳನ್ನು ಅನ್ಯ ರಾಷ್ಟ್ರಕ್ಕೆ ರವಾನಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಜಮೀರ್‌ ಅವರ ಸಾಮಾಜಿಕ ಜಾಲತಾಣಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಜಮೀರ್‌ ಅವರೇ, ಕರ್ನಾಟಕದ ನಿಮ್ಮದೇ ‘ಬಾಂಧವʼರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದೆ.

error: Content is protected !!
Scroll to Top