ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ದ. ಕ. ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಪುತ್ತೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಡಯಟ್ ಮಂಗಳೂರು ಮತ್ತು ಪುತ್ತೂರು ಕೊಂಬೆಟ್ಟಿನ ಸರಕಾರಿ ಪ್ರೌಢಶಾಲೆ ಆಶ್ರಯದಲ್ಲಿ ದ.ಕ. ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ಮಾದರಿ ಜರಗಿತು.

ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ತಲಾ 14 ಮಾದರಿಗಳ ಮತ್ತು ಶಿಕ್ಷಕರ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಫಲಿತಾಂಶದ ವಿವರ:





















































 
 

ವೈಯಕ್ತಿಕ ವಿಭಾಗದಲ್ಲಿ ಮಂಗಳೂರು ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ಸೋನಲ್ ಶನಾ ಅಂಚನ್ (ಪ್ರಥಮ), ಮೂಡಬಿದಿರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮೈತ್ರಿ ಎಮ್. ಎಚ್. ( ದ್ವಿತೀಯ), ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪಂಚಮ ಆರ್. ಶೆಟ್ಟಿ ( ತೃತೀಯ)

ಗುಂಪು ವಿಭಾಗದಲ್ಲಿ

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಶಿವಪ್ರಸಾದ್ ಎಸ್. ಮತ್ತು ಎಡ್ವಿನ್ ಫ್ರಾನ್ಸಿಸ್ ( ಪ್ರಥಮ) ಪುತ್ತೂರು ಸುದಾನ ಪ್ರೌಢಶಾಲೆಯ ಅದ್ವಿಜ್ ಸಜೇಶ್, ಮಿಥುನ್ ಪಿ.ಪಿ. (ದ್ವಿತೀಯ ), ಅಳಿಕೆ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ದಿಗಂತ ಡಿ. ನಂದಾ, ನಮನ್ ಎಸ್. ವಿ. (ತೃತೀಯ )

ಶಿಕ್ಷಕರ ವಿಭಾಗದಲ್ಲಿ

ಉಳ್ಳಾಲದ ಭಾರತ್ ಪ್ರೌಢಶಾಲೆಯ ಪ್ರಜ್ಞಾ (ಪ್ರಥಮ), ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ರೋಷನ್ ಪಿಂಟೊ ( ದ್ವಿತೀಯ), ಮೂಡಬಿದಿರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ನಾಗೇಶ್ ( ತೃತೀಯ ) ಸ್ಥಾನವನ್ನು ಪಡೆದರು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ಡಿಸೆಂಬರ್ ನಲ್ಲಿ ಧಾರವಾಡದಲ್ಲಿ ರಾಜ್ಯಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆಂದು ಸ್ಪರ್ಧೆಯ ನೋಡಲ್ ಅಧಿಕಾರಿ ಡಯಟ್ ಹಿರಿಯ ಉಪನ್ಯಾಸಕರಾದ ಶ್ರೀನಿವಾಸ ಅಡಿಗ ತಿಳಿಸಿದರು.

ಸ್ಪರ್ಧೆಯ ತೀರ್ಪುಗಾರರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ, ಸಿಂಧುವಿ.ಕೆ., ಅಪರ್ಣ ಎಂ.ಎಸ್. ಮತ್ತು ರವೀಂದ್ರ ಶಾಸ್ತ್ರಿ ಸಹಕರಿಸಿದರು.

ಸಮಾರೋಪ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಅಭಿವೃದ್ಧಿ ) ಹಾಗೂ ಡಯಟ್ ಪ್ರಾಂಶುಪಾಲ ಸದಾನಂದ ಪೂಂಜ, ಹಿರಿಯ ಉಪನ್ಯಾಸಕಿ ಫಾತಿಮಾ ಬೇಗಂ, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ವಸಂತ ಮೂಲ್ಯ ಪಿ. ಪ್ರಶಸ್ತಿ ಪತ್ರಗಳನ್ನು ನೀಡಿ ಸ್ಪರ್ಧಿಗಳನ್ನು ಗೌರವಿಸಿದರು.

ಅಮಿತಾ ವಿಜೇತರ ವಿವರ ವಾಚಿಸಿದರು. ರಶ್ಮಿ ಸ್ವಾಗತಿಸಿ, ಕವಿತಾ ವಂದಿಸಿದರು. ಸೌಮ್ಯ ಲಕ್ಶ್ಮೀ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top