ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುರೇಶ್ ATI ಅವರು ನವೆಂಬರ್ 30 ರಂದು ಸೇವಾ ನಿವೃತ್ತಿಯನ್ನು ಹೊಂದುತ್ತಿದ್ದಾರೆ.
1989 ರಲ್ಲಿ ಮಂಗಳೂರು ವಿಭಾಗದಲ್ಲಿ ನಿರ್ವಾಹಕರಾಗಿ ಕಾರ್ಯ ಆರಂಭಿಸಿದ ಅವರು ಆ ಬಳಿಕ ತಮ್ಮ ಉತ್ತಮ ಸೇವೆಯ ಫಲವಾಗಿ ಸಹಾಯಕ ಸಂಚಾರ ನಿಯಂತ್ರಕರಾಗಿ ಮುಂಭಡ್ತಿ ಹೊಂದಿದ್ದರು.
ಅವರ ಸೇವಾ ನಿವೃತ್ತಿಗೆ ಶುಭ ಕೋರಿ ಪುತ್ತೂರು ಘಟಕದ ಎಲ್ಲಾ ಚಾಲಕರ ಪರವಾಗಿ ಪುತ್ತೂರು ಘಟಕದ ಚಾಲಕ ಬೋಧಕ ಪಿ. ವಿ. ಭಟ್ ಅವರು ಶುಭಾಶಂಸೆಗಳನ್ನು ತಿಳಿಸಿದ್ದಾರೆ.
























