ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌

ಸಂವಾದ ಕಾರ್ಯಕ್ರಮದಲ್ಲಿ ಹಿಂದುಗಳ ದೇವತೆಗಳನ್ನು ಅವಮಾನಿಸಿದ್ದ ಮಾಜಿ ಸಚಿವೆ

ಬೆಂಗಳೂರು: ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದು ಕರೆದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ಬಂಡಾಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನ.23ರಂದು ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ‌ ನಡೆದ ಸಂವಾದದಲ್ಲಿ ಲಲಿತಾ ನಾಯ್ಕ್‌ “ರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆದರ್ಶರಲ್ಲ ಅವರು ಕ್ರೂರಿಗಳು” ಎಂಬ ಹೇಳಿದ್ದರು. ಭಕ್ತಿಯ ಜೊತೆಗೆ ಬೆರೆತ ಮೌಢ್ಯ ಜನರ ವಿಚಾರ ಶಕ್ತಿಯನ್ನು ಹಾಳುಮಾಡಿದೆ. ದೇಗುಲಗಳು ಜನರನ್ನ ಮೌಢ್ಯತೆಗೆ ತಳ್ಳುತ್ತಿವೆ. ಗ್ರಂಥಾಲಯಗಳು ಜ್ಞಾನಾರ್ಜನೆಯತ್ತ ಕರೆದೊಯ್ಯುತ್ತವೆ. ಮೌಢ್ಯಗಳಿಂದ ಹೊರಬರಲು ಶಿಕ್ಷಣವೇ ಪರಿಹಾರ. ಮನುಷ್ಯನ ತಪ್ಪುಗಳೇ ಸಾಹಿತ್ಯ, ಮಹಾಕಾವ್ಯಗಳಾಗಿ ರೂಪಿತಗೊಂಡಿವೆ. ಎಂದಿದ್ದರು.





















































 
 

ರಾಮಾಯಣ ಮತ್ತು ಮಹಾಭಾರತ ಕೂಡ ಇಂತಹದ್ದೇ ಸಾಹಿತ್ಯ. ಶಾಂತಿಯ ಪ್ರತೀಕವಾಗಿರುವ ಬುದ್ಧನ ಕೈಯಲ್ಲಿ ಕತ್ತಿ, ಗುರಾಣಿ, ಖಡ್ಗ ಏನೂ ಇಲ್ಲ. ಮಹಾತ್ಮ ಗಾಂಧೀಜಿ ಕೈಯಲ್ಲಿ ಚರಕ ಮಾತ್ರ ಇದೆ. ಇತ್ತೀಚೆಗೆ ಶ್ರೀರಾಮನ ಕೈಗೆ ಬಿಲ್ಲು, ಬಾಣ ನೀಡಲಾಗಿದೆ ಎಂದು ಟೀಕಿಸಿದ್ದರು.

ಈ ಸಂಬಂಧ ಬಡಾವಣೆ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್‌ 299 (ಧಾರ್ಮಿಕ ಭಾವನೆಗೆ ಧಕ್ಕೆ), ಸೆಕ್ಷನ್‌ 353 (ಸಾರ್ವಜನಿಕವಾಗಿ ಅವಹೇಳನ) ಹಾಗೂ ಸೆಕ್ಷನ್‌ 352 (ಶಾಂತಿ ಕದಡಲು ಉದ್ದೇಶಪೂರ್ವ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top