ಪುತ್ತೂರು: ಸರ್ವೆಯ ಗಡಪಿಲ ಎಂಬಲ್ಲಿ ಇಂದು ಮುಂಜಾನೆ ಅಕ್ರಮ ಗೋ ಸಾಗಾಟದ ವಾಸನೆ ಮೂಗಿಗೆ ಬಡಿದಿದ್ದು, ರಸ್ತೆ ಬದಿಯಲ್ಲಿ ಗೋಕಳ್ಳರು ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ರಸ್ತೆ ಬದಿ 5 ಗೋವುಗಳು ಕಂಡು ಬಂದಿವೆ.
ತಕ್ಷಣವೇ ಹಿಂದೂ ಸಂಘಟನೆಗಳು ಎಚ್ಚೆತ್ತುಕೊಂಡು, ರಸ್ತೆ ಬದಿಯಲ್ಲಿ ಬಿಡಲಾಗಿದ್ದ ಗೋವುಗಳನ್ನು ಪುತ್ತೂರು ನಗರ ಪೊಲೀಸು ಠಾಣೆಗೆ ಸಾಗಿಸಿ ರಕ್ಷಿಸಿದ್ದಾರೆ. ಈ ಗೋವುಗಳಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೋಶಾಲೆಯಿಂದ ಬೈಹುಲ್ಲಿನ ವ್ಯವಸ್ಥೆ ಮಾಡಲಾಗಿದೆ.
ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ಕೆಟ್ಟು ನಿಂತ ಪರಿಣಾಮ ಗೋವುಗಳನ್ನು ರಸ್ತೆಯಲ್ಲಿ ಬಿಟ್ಟು ವಾಹನ ಸಮೇತ ಕಳ್ಳರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣವನ್ನು ಬಲವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದೆ.
























