ರೋಡ್ ಶೋದಲ್ಲಿ ಪ್ರಧಾನಿಯನ್ನು ಕಂಡು ಪುಳಕಿತರಾದ ಜನ
ಉಡುಪಿ: 17 ವರ್ಷಗಳ ಬಳಿಕ ಕೃಷ್ಣನಗರಿ ಉಡುಪಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃಷ ಮಠದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಕೃಷ್ಣ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಮೋದಿ ತೊಡಗಿಸಿಕೊಂಡಿದ್ದಾರೆ. ಪರ್ಯಾಯ ಪುತ್ತಿಗೆ ಶ್ರೀಗಳು ತಿಲಕವಿಟ್ಟು ಪ್ರಧಾನಿಯನ್ನು ಸಾಂಪ್ರದಾಯಿಒಕವಾಗಿ ಸ್ವಾಗತಿಸಿದರು. ಮಧ್ವ ತೀರ್ಥದಲ್ಲಿ ತೀರ್ಥ ಸಂಪ್ರೋಕ್ಷಣೆಯಾದ ಬಳಿಕ ಕನಕನ ಕಿಂಡಿಯ ಮೂಲಕ ಮೋದಿ ಕೃಷ್ಣನ ದರ್ಶನ ಪಡೆದರು.


2008ರ ಮೇ 8ರಂದು ಪ್ರಧಾನಿ ಆಗುವುದಕ್ಕೂ ಮುನ್ನ ಮೊದಲ ಬಾರಿಗೆ ಆಗಮಿಸಿದ್ದರು. ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಸೇನಾ ಹೇಲಿಕಾಪ್ಟರ್ನಲ್ಲಿ ಉಡುಪಿಗೆ ಬಂದಿಳಿದ ಮೋದಿ ಸುಮಾರು 2 ಕಿಮೀ ವರೆಗೆ ಅದ್ದೂರಿ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿಗಳ ಆಗಮನಕ್ಕಾಗಿ ಬೆಳಗ್ಗಿನಿಂದಲೂ ಕಾದು ಕುಳಿತಿದ್ದ ಜನ ಪುಷ್ಪಮಳೆ ಸುರಿಸಿ ಸಂತಸ ಪಟ್ಟಿದ್ದಾರೆ. ಪ್ರಧಾನಿ ಜನರತ್ತ ಹೂ ಎಸೆದು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.ಹುಲಿವೇಷ ಸಹಿತ ತುಳುನಾಡಿನ ಸಾಂಪ್ರದಾಯಿಕ ಕಲೆಗಳ ಮೂಲಕ ಮೋದಿಯನ್ನು ಉಡಡುಪಿಗೆ ಸ್ವಾಗತಿಸಲಾಯಿತು.
ರೋಡ್ ಶೋ ಮುಗಿಯುತ್ತಿದ್ದಂತೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ರಥಬೀದಿ ಮೂಲಕ ಆಗಮಿಸಿದ ಮೋದಿ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದಿದ್ದಾರೆ. ಬಳಿಕ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಪ್ರೋಕ್ಷಣೆ ಮಾಡಿ, ನಂತರ ಮಠದೊಳಕ್ಕೆ ತೆರಳಿದ್ದಾರೆ.
























