ಕರ್ನಾಟಕ ಯಕ್ಷ ಭಾರತಿ ಪುತ್ತೂರು (ರಿ ) ಪುತ್ತೂರು ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಯಕ್ಷಾಂಗಣ ಮಂಗಳೂರು ಸಹಯೋಗದಲ್ಲಿ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ತೆರಗಿದ 13ನೇ ವರ್ಷದ ತಾಳಮದ್ದಳೆ ಸಪ್ತಾಹದಲ್ಲಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ (ರಿ) ತಂಡದಿಂದ ಶಲ್ಯ ಪರ್ವ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸಂತೋಷ್ ಕುಮಾರ್ ಹರಿಹರ ಹಿಮ್ಮೇಳದಲ್ಲಿ ಮುರಳಿಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ಪ್ರೊ.ಪವನ್ ಕಿರಣ್ ಕೆರೆ( ಶಲ್ಯ) ದಿವಾಕರ ಆಚಾರ್ಯ ಗೇರುಕಟ್ಟೆ( ಶ್ರೀ ಕೃಷ್ಣ ) ಅಂಬಾ ಪ್ರಸಾದ್ ಪಾತಾಳ( ಶಕುನಿ )ಶ್ರೀಧರ ಎಸ್ಪಿ ಸುರತ್ಕಲ್(ಸಹದೇವ) ಸತೀಶ ಶಿರ್ಲಾಲು( ಕೌರವ )ಜಯರಾಮ ಭಟ್ ದೇವಸ್ಯ(ಧರ್ಮರಾಯ ) ಮತ್ತು ಗೀತಾ ಕುದ್ದಣ್ಣಾಯ( ಅಶ್ವತ್ಥಾಮ ) ಭಾಗವಹಿಸಿದ್ದರು.
ಸಂಸ್ಮರಣ ಕಾರ್ಯಕ್ರಮ : ತಾಳಮದ್ದಳೆ ಅರ್ಥದಾರಿ ವಿದ್ವಾನ್ ದಿ.ಕೆ. ಕಾಂತ ರೈ ಮೂಡಬಿದ್ರೆ ಇವರ ಸಂಸ್ಮರಣೆಯನ್ನು ರವೀಂದ್ರ ರೈ ಕಲ್ಲಿಮಾರ್ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದ ಮಂಗಳೂರು ಎಸ್ ಕೆ ಜಿ ಐ ಸೊಸೈಟಿಯ ಅಧ್ಯಕ್ಷರಾದ ಉಪೇಂದ್ರಚಾರ್ಯ ಪೆರ್ಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಸಿ.ಎಸ್ ಭಂಡಾರಿ ಇರಾ, ಸ್ವರ್ಣ ಸುಂದರ್,ಶ್ರೀನಾಥ ಕೊಂಡೆ,ಗೋಪಾಲ್ ಶೆಟ್ಟಿ ಅರಿಬೈಲು, ವಿಶ್ರಾಂತ ಪ್ರಾಂಶುಪಾಲ ಶಂಕರ್ ಶೆಟ್ಟಿ,ವಿಶಾಲಕೀರ್ತಿ ರೈ ಮೂಡಬಿದಿರೆ ಉಪಸ್ಥಿತರಿದ್ದರು.
ಪ್ರಸಂಗಕರ್ತ ರಘುರಾಮ ಶೆಟ್ಟಿ ಕಂದಾವರ ಅವರ ನಿಧನಕ್ಕೆ ಭಾಸ್ಕರ್ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿ ಯಕ್ಷಾoಗಣ ಪರವಾಗಿ ಶ್ರದ್ಧಾಂಜಲಿ ಅರ್ಪಿಸಿದರು.ವೀರರಾಣಿ ಅಬ್ಬಕ್ಕ 500 ನೇ ವರ್ಷದ ಸಂಸ್ಮರಣೆಯ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಮಾಧವ ಎಂ ಕೆ ಇವರನ್ನು ಅಭಿನಂದಿಸಲಾಯಿತು.
ಕಲಾಪೋಷಕ ಉಮೇಶ ಶೆಣೈ ರಾಮನಗರ ಉಪ್ಪಿನಂಗಡಿ ಇವರನ್ನು ಕೂಡ ಗೌರವಿಸಲಾಯಿತು.
ಯಕ್ಷಾoಗಣ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಸುಧಾಕರ್ ರಾವ್ ಪೇಜಾವರ ವಂದಿಸಿದರು. ನಿವೇದಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
























