ಕರಾಟೆ: ದೀಪ್ತ ಡಿ.ಕೆ. ಸುಳ್ಯದಲ್ಲಿ ಪ್ರಥಮ, ಮಂಗಳೂರಿನಲ್ಲಿ ದ್ವಿತೀಯ

ಪುತ್ತೂರು: ಸುಳ್ಯದಲ್ಲಿ ನಡೆದ ಇಂಪ್ಯಾಕ್ಟ್ ಆರ್ಟ್ ಅಂಡ್ ಸ್ಪೋರ್ಟ್ಸ್ ಅಸೋಸಿಯೇಷನ್ ನಡೆಸಿದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್‌ಶಿಪ್ 2025ರ ಸ್ಪರ್ಧೆಯಲ್ಲಿ IKMA ಪುತ್ತೂರು ಸಂಸ್ಥೆಯ ವಿದ್ಯಾರ್ಥಿನಿ ಕು. ದೀಪ್ತ ಡಿ.ಕೆ. ಕಟಾ ಹಾಗೂ ಕುಮಿಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

ಹಾಗೆಯೇ ಮಂಗಳೂರಿನ ಫಾ. ಮುಲ್ಲರ್ ಒಳಾಂಗಡ ಕ್ರೀಡಾಂಗಣದಲ್ಲಿ ನಡೆದ ಅಸ್ಮಿತ ಖೇಲೋ ಇಂಡಿಯಾ ಕಿಕ್ ಬಾಕ್ಸಿಂಗ್ 2025-26 ರಲ್ಲಿ ಪಾಯಿಂಟ್ ಫೈಟ್ ಫೈಟ್ ಮತ್ತು ಕ್ರಿಯೇಟಿವ್ ಫಾರ್ಮ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಅವರು IKMA ಪುತ್ತೂರು ಶಾಖೆಯ ತರಬೇತುದಾರ ಶಿವಪ್ರಸಾದ್ ಕೆ. ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದು ಸ. ಹಿ. ಪ್ರಾ. ಶಾಲೆ, ಹಾರಾಡಿ ಇಲ್ಲಿ 3ನೇ ತರಗತಿ ವಿದ್ಯಾರ್ಥಿನಿ.





















































 
 

ಬನ್ನೂರು ಕರ್ಮಲ ನಿವಾಸಿ ಪ್ರಾಧ್ಯಾಪಕ ಪ್ರೊ. ದೀಕ್ಷಿತ್ ಕುಮಾರ್ ಹಾಗೂ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ಜಿ. ದಂಪತಿ ಪುತ್ರಿ.

error: Content is protected !!
Scroll to Top