ಹೃದಯಾಘಾತದಿಂದ ಪುತ್ತೂರಿನ ಯುವಕ ಬೆಂಗಳೂರಿನಲ್ಲಿ ನಿಧನ

ಪುತ್ತೂರು: ಪಡ್ನೂರು ಪಂಜಿಗುಡ್ಡೆಯ ನಿವಾಸಿ ಯುವಕನೊಬ್ಬ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಕೆನರಾ ಬ್ಯಾಂಕಿನ ಪುತ್ತೂರು ಶಾಖೆಯ ಸಿಬ್ಬಂದಿ ತನಿಯಪ್ಪ ನಾಯ್ಕ್ ಎಂಬವರ ಪುತ್ರ ಗುರುರಾಜ್ (22) ಎಂಬವರೇ ‌ಮೃತ ದುರ್ದೈವಿ.

ಗುರುರಾಜ್ ಬೆಂಗಳೂರಿನ ಕಿಸ್ಕೋ ಕಂಪನಿಯಲ್ಲಿ ಎ.ಸಿ. ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಿ.ಜಿ. ಯಲ್ಲಿ ವಾಸವಿದ್ದರು. ರಾತ್ರಿ ಪಾಳಿಯಲ್ಲಿ ‌ಕೆಲಸ‌ ಮಾಡುತ್ತಿದ್ದ ಅವರು ಕೆಲಸಕ್ಕೆ ಹೊರಡುವ ಮೊದಲು ಬಾತ್ ರೂಂ‌ಗೆ ಹೋಗಿದ್ದಾರೆ. ಅದೇ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಆದರೆ ರೂಮ್‌ನಲ್ಲಿ ಯಾರೂ ಇರದೇ ಇದ್ದು, ಮರುದಿನ ಅವರ ರೂಮೇಟ್‌ಗಳು ಬಂದಾಗಲಷ್ಟೇ ಘಟನೆ ಬೆಳಕಿಗೆ ಬಂದಿದೆ.





















































 
 

ಗುರುರಾಜ್ ಅವರು ತಂದೆ, ತಾಯಿ, ತಂಗಿಯನ್ನು ಅಗಲಿದ್ದಾರೆ.

error: Content is protected !!
Scroll to Top