ಪಲ್ಟಿಯಾಗಿ ನಜ್ಜುಗುಜ್ಜಾದ ಕಾರು: ಚಾಲಕನಿಗೆ ಗಾಯ

ಪುತ್ತೂರು: ಬಡಕ್ಕೋಡಿ ಮಸೀದಿ ಸಮೀಪದ ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಾರಿನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡ ಘಟನೆ ನಡೆದಿದೆ.

ಗಾಯಾಳು ಚಾಲಕನನ್ನು ‌ಸವಣೂರಿನ ಯತೀಶ್‌ ಕೆಡೆಂಜಿ ಎಂದು ಗುರುತಿಸಲಾಗಿದೆ. ಅವರ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾಗೆಯೇ ಅವರು ಚಲಾಯಿಸುತ್ತಿದ್ದ ರಿಟ್ಜ್ ಕಾರು ನಜ್ಜುಗುಜ್ಜಾಗಿದ್ದು, ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಯತೀಶ್‌ ಅವರು ಪುತ್ತೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಕಾರಿನ ಚಾಲಕ ಅಡ್ಡ ಬಂದ ಮಗುವನ್ನು ಉಳಿಸಲು ಹೋಗಿ ಏಕಾಏಕಿ ಬಲಭಾಗಕ್ಕೆ ಚಲಾಯಿಸಿದ್ದಾರೆ. ಪರಿಣಾಮ ಹಿಂದಿದ್ದ ಯತೀಶ್ ಅವರ ಕಾರು ನಿಯಂತ್ರಣ ತಪ್ಪಿ ರಸ್ತೆಯ ಕಣಿವೆಗೆ ಉರುಳಿ‌ ಬಿದ್ದಿದೆ.





















































 
 
error: Content is protected !!
Scroll to Top