ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್, ಪುತ್ತೂರು, ಅರಸ್ ಟ್ರಸ್ಟ್, ಪುತ್ತೂರು ಮತ್ತು ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಇವುಗಳ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ ನಡೆಯಲಿರುವ ಡ್ರೋನ್ ಹಾರಿಸುವ ಅತ್ಯುನ್ನತ ದರ್ಜೆಯ 12 ದಿನಗಳ ಉಚಿತ ತರಬೇತಿಗೆ ಸಂದರ್ಶನ ನಡೆಯಲಿದೆ.
ಸಂದರ್ಶನ ಯಾವಾಗ, ಎಲ್ಲಿ, ಎಷ್ಟೊತ್ತಿಗೆ?
- ದಿನಾಂಕ 01.12.2025ನೇ ಸೋಮವಾರ
- ಪುತ್ತೂರು ನೆಲ್ಲಿಕಟ್ಟೆಯ ಒಕ್ಕಲಿಗ ಟ್ರಸ್ಟ್ ಸೌಧದ ಸಭಾಭವನದಲ್ಲಿ.
- ಮುಂಜಾನೆ 10ರಿಂದ.
ಯಾರು ಅರ್ಹರು?
- ದಕ್ಷಿಣ ಕನ್ನಡ ಜಿಲ್ಲೆಯ, 21ರಿಂದ 35 ವರ್ಷಗಳ ವಯೋಮಾನದ ಒಳಗಿನ ಮಹಿಳೆಯರು.
- ಇಂಜಿನಿಯರಿಂಗ್ ಅಥವಾ ಇತರ ಪದವೀಧರರು/ ಪಾಲಿಟೆಕ್ನಿಕ್ ಓದಿದವರು.
- ಇಂಗ್ಲೀಷ್ ನಲ್ಲಿ ಸಂವಹನ ಮಾಡಬಲ್ಲವರು.
ಸಂದರ್ಶನಕ್ಕೆ ಹಾಜರಾಗುವಾಗ ಏನೇನು ತರಬೇಕು?
- ಆಧಾರ್ ಕಾರ್ಡ್ (ಮೂಲಪ್ರತಿ ಮತ್ತು ನಕಲು ಪ್ರತಿ)
- ಒಂದು ಪಾಸ್ ಪೋರ್ಟ್ ಗಾತ್ರದ ಫೋಟೋ
- ಸ್ವಯಂ ಸಹಿ ಮಾಡಿದ ಒಂದು ಪ್ರತಿ ವ್ಯಕ್ತಿ ವಿವರ (bio data)
ತರಬೇತಿಯ ಪ್ರಯೋಜನ
- ಈ ತರಬೇತಿ ಪಡೆದ ಪ್ರಮಾಣೀಕೃತರಿಗೆ ಸ್ವಂತ ಡ್ರೋನ್ ಕೊಂಡುಕೊಂಡು ಹಾರಿಸಲು ಅನುಮತಿ ಇರುತ್ತದೆ.
- ರಿಯಾಯಿತಿ ದರದಲ್ಲಿ ಡ್ರೋನ್ ಉಪಕರಣ ದೊರೆಯುತ್ತದೆ.
- ಸರ್ವೇ ಕಾರ್ಯ, ಪೈಪ್ ಲೈನ್ ಕಾಮಗಾರಿ, ಸಿವಿಲ್ ಕೆಲಸಗಳ ಅನುಷ್ಠಾನ, ಕೃಷಿ ತೋಟಗಳಿಗೆ ಔಷಧಿ ಸಿಂಪಡಣೆ, ವಿದೇಶಗಳಲ್ಲಿ ಉದ್ಯೋಗವಕಾಶ ಮುಂತಾದ ಪ್ರಯೋಜನಗಳು ಇವೆ.
ತರಬೇತಿ ಯಾವಾಗ?
2025ರ ದಶಂಬರ ತಿಂಗಳ ಎರಡನೇ ವಾರದಲ್ಲಿ ತರಬೇತಿ ನಡೆಯಲಿದೆ.
ಆಸಕ್ತ ಮಹಿಳೆಯರು 9448725813 / 8217595631 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
























