ನ. 27 ರಿಂದ 11 ದಿನಗಳ ಕಾಲ ಕಬ್ಬನ್ ಪಾರ್ಕ್‌ನಲ್ಲಿ ಫಲ ಪುಷ್ಪ ಪ್ರದರ್ಶನ

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ತೋಟಗಾರಿಕಾ ಇಲಾಖೆಯ ಫಲ ಪುಷ್ಪ ಪ್ರದರ್ಶನ ನ. 27 ರಿಂದ ತೆೊಡಗಿದಂತೆ ಒಟ್ಟು 11 ದಿನಗಳ ಕಾಲ ನಡೆಯಲಿದೆ.

ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಇಲ್ಲಿ ಆಯೋಜನೆ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಈ ವರೆಗೆ ಸಣ್ಣ ಪುಟ್ಟ ಕಾರ್ಯಕ್ರಮಗಳಷ್ಟೇ ಈ ಪಾರ್ಕ್‌ನಲ್ಲಿ ನಡೆಯುತ್ತಿತ್ತು.

ಈ ಫಲ ಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಸಂದರ್ಶಿಸುವರು ನೂರಾರು ಬಗೆಯ ಹೂವು ಹಣ್ಣುಗಳನ್ನು ಕಾಣಬಹುದು. ವಿವಿಧ ವಿಷಯಗಳ ನೂರಾರು ಮಳಿಗೆಗಳೂ ಈ ಮೇಳದಲ್ಲಿ ಇರಲಿದೆ.





















































 
 

ಈ ಕಾರ್ಯಕ್ರಮಕ್ಕೆ ಇಲಾಖೆ ಸುಮಾರು 40 ಲಕ್ಷ ರೂ. ಗಳನ್ನು ಮೀಸಲಿಟ್ಟಿರುವುದಾಗಿ ತಿಳಿದು ಬಂದಿದೆ. ವಯಸ್ಕರಿಗೆ ₹30 ಮತ್ತು ಮಕ್ಕಳಿಗೆ ₹10 ಪ್ರವೇಶ ಶುಲ್ಕ ಎಂದು ನಿಗದಿಪಡಿಸಲಾಗಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳು ಗುರುತಿನ ಚೀಟಿಯೊಂದಿಗೆ ಉಚಿತವಾಗಿ ಪ್ರವೇಶಿಸಬಹುದು. ಪ್ರದರ್ಶನದ ಅವಧಿಗೆ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗುವುದು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನವೆಂಬರ್ 27 ರಂದು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

error: Content is protected !!
Scroll to Top