ಕಾರ್ಕಳ: ಕುದುರೆಮುಖ – ಮಾಳ ರಸ್ತೆಯಲ್ಲಿ ಕಾಶ್ಮೀರದಿಂದ ಮಂಗಳೂರಿಗೆ ಸೇಬು ಹಣ್ಣುಗಳನ್ನು ರವಾನೆ ಮಾಡುತ್ತಿದ್ದ ಲಾರಿಯೊಂದು ಟೈರ್ ಸ್ಪೋಟಗೊಂಡ ಪರಿಣಾಮ ಹೊತ್ತಿ ಉರಿದ ಘಟನೆ ನಡೆದಿದೆ. ಚಾಲಕ ಮತ್ತು ಸಹಾಯಕ ಅಪಾಯದಿಂದ ಪಾರಾಗಿದ್ದಾರೆ.
ಶನಿವಾರ ಮುಂಜಾನೆ ಈ ದುರಂತ ನಡೆದಿದೆ. ಘಾಟಿಯಲ್ಲಿ ಲಾರಿ ಇಳಿಯುತ್ತಿದ್ದ ಸಂದರ್ಭದಲ್ಲಿ ಟಯರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಗಳ ಸೇಬು ಹಣ್ಣುಗಳು ಬೆಂಕಿಗಾಹುತಿಯಾಗಿದ್ದು, ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ.
























