ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ತನ್ನ ಸ್ನೇಹಿತೆಗೆ ಮಗು ಕರುಣಿಸಿದ ಆರೋಪಿ ಶ್ರೀಕೃಷ್ಣನ ವಿರುದ್ಧ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮತ್ತೆ ಗುಡುಗಿದ್ದಾರೆ.
ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ವಂಚಿಸಿ, ಲೈಂಗಿಕವಾಗಿ ಬಳಸಿಕೊಂಡು ಮಗು ಕೊಟ್ಟು ಸದ್ಯ ಮದುವೆಯಾಗುವುದಿಲ್ಲ ಎಂದು ಹೇಳಿ ಜೈಲು ಸೇರಿರುವ ಶ್ರೀಕೃಷ್ಣನ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ. ಸಂತ್ರಸ್ತೆಗೆ ಆತನ ಜೊತೆ ಮದುವೆ ಮಾಡಿಸಲು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ಒಂದರ ನಿಮಿತ್ತ ಪುತ್ತೂರಿಗೆ ಆಗಮಿಸಿದ್ದ ಅವರು, ಸಂತ್ರಸ್ತ ಯುವತಿಯ ಜೊತೆ ನಾನಿದ್ದೇನೆ. ಈ ಪ್ರಕರಣವನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಈ ವಿವಾದಕ್ಕೆ ಸಂಬಂಧಿಸಿದ ಹಾಗೆ ನನ್ನ ಮೇಲೆಯೂ ಪ್ರಕರಣವೊಂದು ದಾಖಲಾಗಿದೆ. ಅದನ್ನು ನಾನು ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ. ಇದಕ್ಕೆ ಉತ್ತರಿಸಲು ನಾನು ಕೆಲವೇ ದಿನಗಳಲ್ಲಿ ಪುತ್ತೂರಿಗೆ ಬರುತ್ತೇನೆ. ಸಂತ್ರಸ್ತೆಗೆ ನ್ಯಾಯ ಕೊಡಿಸಲು ಹೋರಾಡುತ್ತೇನೆ ಎಂದು ಹೇಳಿದ್ದಾರೆ.
























