ಒಳನುಸುಳುಕೋರರನ್ನು ಹುಡುಕಿ – ಹುಡುಕಿ ಹೊರಗಟ್ಟಲಾಗುವುದು: ಅಮಿತ್ ಶಾ

ಗಾಂಧಿನಗರ: ಭಾರತದೊಳಗೆ ಸೇರಿಕೊಂಡಿರುವ ‌ಪ್ರತಿಯೊಬ್ಬ ಒಳನುಸುಳುಕೋರನನ್ನು ಸಹ ಹುಡುಕಿ – ಹುಡುಕಿ ಹೊರಕ್ಕಟ್ಟುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಡುಗಿದ್ದಾರೆ.

ಗುಜರಾತ್‌‌ ಭುಜ್‌ನಲ್ಲಿ ನಡೆದ ಬಿ‌ಎಸ್‌ಎಫ್ ವಜ್ರ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಎಂದು ಹೇಳಿದ್ದಾರೆ.

ಎಸ್‌ಐಆ‌ರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬೆನ್ನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದು, ಕೆಲ ಪಕ್ಷಗಳು ಒಳನುಸುಳುಕೋರರ ಮತಕ್ಕಾಗಿ ಈ ಪ್ರಕ್ರಿಯೆ ನಡೆಸದಂತೆ ತಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





















































 
 

error: Content is protected !!
Scroll to Top