ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ:

ಪುತ್ತೂರು : ಅಕ್ಷಯ ಪದವಿ ಕಾಲೇಜಿನಲ್ಲಿ ದ.ಕ ಹಾಗೂ ಕೊಡಗು ಜಿಲ್ಲಾಮಟ್ಟದ ನಾಲ್ಕನೇ ವರ್ಷದ
ಅಟರ್ನೆಸ್ 2K25 ಪಿಯು ಫೆಸ್ಟ್ ಅತ್ಯುತ್ತಮವಾಗಿ ಸಂಪನ್ನಗೊಂಡಿತು.

18 ಕಾಲೇಜುಗಳಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಫೆಸ್ಟ್ ನಲ್ಲಿ ಭಾಗವಹಿಸಿದ್ದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕಬಡ್ಡಿ ತರಬೇತುದಾರ ಪ್ರಶಾಂತ್ ರೈ ಕೈಕಾರ (ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡ ಪುತ್ತೂರು) ಆಗಮಿಸಿದ್ದು, ಅವರನ್ನು ಕ್ರೀಡಾ ಸಾಧನೆಗಾಗಿ ಸನ್ಮಾನಿಸಲಾಯಿತು.





















































 
 

ಈ ವೇಳೆ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ದೈಹಿಕ ಮತ್ತು ಮಾನಸಿಕ ಅರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇನ್ನೊರ್ವ ಅತಿಥಿ ಬಾಲಕೃಷ್ಣ ರೈ ಪೋರ್ದಲ್, (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸಹಶಿಕ್ಷಕರು ಲಿಟ್ಲ್ ಪ್ಲವರ್ ಶಾಲೆ ಪುತ್ತೂರು) ಇವರ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗೆ ಗೌರವಿಸಿ ಸಮ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲ್ ಅವರು
ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ­ಪರ ಶಿಕ್ಷಣ ದೊರಕುವಂತೆ ಮಾಡುವ ಉದ್ದೇಶದಿಂದ ವಿದೇಶಗಳಿಗೆ ಇಂಟರ್ನ್‌ಶಿಪ್‌ಗೆ ತೆರಳುವ ವ್ಯವಸ್ಥೆಯನ್ನು ಕಾಲೇಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ವೃತ್ತಿಪರ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಭಾಗವಹಿಸಿದ ಎಲ್ಲಾ ಕಾಲೇಜುಗಳಿಗೆ ಹಾಗೂ ಉಪನ್ಯಾಸ ವೃಂದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.

ವೇದಿಕೆಯಲ್ಲಿ ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಗಂಗಾರತ್ನ, ಕಾಲೇಜು ನಾಯಕ ರಾಕೇಶ್ ತೃತೀಯ ಐ.ಡಿ. ಉಪಸ್ಥಿತರಿದ್ದರು.

ಅಟರ್ನೆಸ್ 2K25 ಸಮಗ್ರ ಪ್ರಶಸ್ತಿ : ಎನ್.ಎಮ್.ಪಿ.ಯು ಕಾಲೇಜು ಸುಳ್ಯ
ಪ್ರಥಮ ರನ್ನರ್ ಆಪ್ ಪ್ರಶಸ್ತಿ : ಎಸ್. ಡಿ. ಎಮ್ ಕಾಲೇಜು ಉಜಿರೆ
ದ್ವಿತೀಯ ರನ್ನರ್ ಆಪ್ ಪ್ರಶಸ್ತಿ : ಕೆ. ಎಸ್. ಗೌಡ ಕಾಲೇಜು ನಿಂತಿಕಲ್ಲು
ಸೂಪರ್ ಸ್ಟಾರ್ ಪ್ರಶಸ್ತಿ: ಎಲ್ಲಾ ಸ್ಪರ್ಧೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳ ಭಾಗವಹಿಸುವಿಕೆ.: ಎನ್.ಎಮ್.ಪಿ.ಯು. ಕಾಲೇಜು ಸುಳ್ಯ

ಪದವಿ ಕಾಲೇಜಿನ ಪ್ರಾಚಾರ್ಯ ಸಂಪತ್ ಪಕ್ಕಳ ಸ್ವಾಗತಿಸಿ, ಉಪನ್ಯಾಸಕಿಯರಾದ ಕಾವ್ಯ ಶ್ರೀ ಮತ್ತು ದೀಕ್ಷಾ ರೈ ವಂದಿಸಿದರು. ಶೃತ ಮತ್ತು ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!
Scroll to Top