ಪುತ್ತೂರು: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರ ಮೇಲೆ ಕಳ್ಳರು ವಕ್ರದೃಷ್ಟಿ ಬೀರಿದ್ದು, ಮದುವೆ ಮನೆಯಿಂದ ಸುಮಾರು 1 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿ ಶಾಕ್ ನೀಡಿದೆ.
ಈ ಸಂಬಂಧ ಮನೆಯ ಮಾಲೀಕ ವೀರಮಂಗಲದ ಸುಳಿಮೇಲು ನಿವಾಸಿ ಅಚ್ಯುತ ಗೌಡ (57) ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಗಳ ನಿಶ್ಚಿತಾರ್ಥ, ಮದುವೆಯ ಕಾರ್ಯಗಳಲ್ಲಿ ಕುಟುಂಬ ಬ್ಯುಸಿ ಯಾಗಿದ್ದ ಸಮಯದಲ್ಲಿ ಕಳ್ಳರು ಕೈಚಳಕ ತೋರಿರುವುದಾಗಿದೆ. ಅಚ್ಯುತ ಗೌಡ ಅವರು ಸುಮಾರು 36 ಗೋಣಿ ಅಡಿಕೆಯನ್ನು ಅಟ್ಟದಲ್ಲಿ ಇರಿಸಿದ್ದರು. ಅವುಗಳ ಪೈಕಿ ಸುಮಾರು 16 ಗೋಣಿಗಳನ್ನು ಕಳ್ಳರು ಹೊತ್ತೊಯ್ದಿರುವುದಾಗೆದ.
























