ಪುರುಷೋತ್ತಮ ಬಿಳಿಮಲೆ ‌ವಿರುದ್ಧ ಹರಿಹಾಯ್ದ ಬಿ. ವೈ. ವಿಜಯೇಂದ್ರ

ಪುತ್ತೂರು: ಯಕ್ಷಗಾನ ಕಲಾವಿದರಲ್ಲಿ ಹಲವರು ಸಲಿಂಗ ಕಾಮಿಗಳಿದ್ದಾರೆ ಎಂದು ಹೇಳುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿವಾದ ಸೃಷ್ಟಿ ಮಾಡಿದ್ದು, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಬಿಳಿಮಲೆ ಕೇವಲ ಯಕ್ಷಗಾನಕ್ಕೆ ಮಾತ್ರವಲ್ಲ, ಕರಾವಳಿ ಭಾಗಕ್ಕೆ, ಹಿಂದೂ ಸಮಾಜಕ್ಕೆ ಅವಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮನಸ್ಥಿತಿ ಇದು. ಕರಾವಳಿಯ ಸಂಸ್ಕೃತಿ, ಪರಂಪರೆಯ ಬಗ್ಗೆ ಕೊಂಚವಾದರೂ ಗೌರವ ಇದ್ದಿದ್ದರೆ ಅವರು ಈ ತರದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರನ್ನು ಸರ್ಕಾರ ತಕ್ಷಣವೇ ಹುದ್ದೆಯಿಂದ ಕಿತ್ತು ಹಾಕಬೇಕು. ಅವರ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.





















































 
 
error: Content is protected !!
Scroll to Top