ಶ್ರೀ ಆಂಜನೇಯ 57ನೇ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ

ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಸಂಘ ಬೊಳುವಾರು ಪುತ್ತೂರು ಇದರ ಶ್ರೀ ಆಂಜನೇಯ 57ನೇ ವಾರ್ಷಿಕೋತ್ಸವವು ಡಿಸೆಂಬರ್ 25 ರಂದು ಗುರುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಅಪರಾಹ್ನ ಗಂಟೆ 2 ರಿಂದ ನಡೆಯಲಿದೆ.

ಹಿರಿಯ ಕಲಾವಿದರಿಂದ ತಾಳಮದ್ದಳೆ,ಶ್ರೀ ಶ್ರೀ ಎಡನೀರು ಶ್ರೀಗಳ ಸಾನಿಧ್ಯದಲ್ಲಿ ಶ್ರೀಯಕ್ಷಾಂಜನೇಯ ಪ್ರಶಸ್ತಿ ಮತ್ತು ಶ್ರೀಮತಿ ಶಾಂತ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಆವಾರ್ಡ್ ಪ್ರದಾನಿಸುವುದೆಂದು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದರು.

ಪರ್ಲಡ್ಕದ ಶಿವಪೇಟೆಯ ಅಗಸ್ತ್ಯದಲ್ಲಿ ಜರಗಿದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸದಸ್ಯರಾದ ಗುಂಡ್ಯಡ್ಕ ಈಶ್ವರ ಭಟ್, ದುಗ್ಗಪ್ಪ ಎನ್, ಪರೀಕ್ಷಿತ್, ವೇಣುಗೋಪಾಲ ಭಟ್,ಹರಿಣಾಕ್ಷಿ ಜೆ ಶೆಟ್ಟಿ, ಭಾರತಿ ರೈ ಆರಿಯಡ್ಕ, ಆನಂದ ಸವಣೂರು, ಸತೀಶ್. ಕೆ, ಅಚ್ಯುತ. ಕೆ, ಶಾರದಾ ಅರಸ್, ಕಿಶೋರಿ ದುಗ್ಗಪ್ಪ ಭಾಗವಹಿಸಿದ್ದರು.ಸ್ವರ್ಣಲತಾ ಭಾಸ್ಕರ್ ವಂದಿಸಿದರು.





















































 
 
error: Content is protected !!
Scroll to Top