ಜೈಪುರ: RSS ಗೆ ಸಂಬಂಧಿಸಿದ ಹಾಗೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾತನಾಡಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸ್ಪರ್ಧೆ ನೀಡಲೆಂದು ಹಲವರು ಪ್ರಯತ್ನ ಮಾಡಿ ತಮ್ಮದೇ ಶಾಖೆಯನ್ನು ಸ್ಥಾಪಿಸಿದರು. ಆದರೆ ಅವುಗಳು 15 ದಿನಗಳ ಕಾಲ ಸಹ ಉಳಿಯಲಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷಗಳಿಂದ ನಡೆಯುತ್ತಿದೆ. ಇನ್ನೂ ಬೆಳೆಯುತ್ತದೆ. ಇದಕ್ಕೆ ಕಾರಣ ಸ್ವಯಂಸೇವಕರ ಸಮರ್ಪಣಾ ಮನೋಭಾವ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಘ ನಡೆಯುತ್ತಿರುವುದು ಸ್ವಯಂಸೇವಕರ ಭಾವನಾತ್ಮಕ ಶಕ್ತಿ ಮತ್ತು ಜೀವ ಶಕ್ತಿಯ ಕಾರಣಕ್ಕೆ. ಅವರ ಮನಸ್ಥಿತಿಯ ಕಾರಣದಿಂದಲೇ ಅವರು ಪ್ರಚಾರಕರಾಗುತ್ತಾರೆ. ಸಂಘಕ್ಕಿರುವ ಶಕ್ತಿ ಅದು ಎಂದು ಅವರು ತಿಳಿಸಿದ್ದಾರೆ.
























