ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದಿಂದ ತೆನ್ಕಾಯಿಮಲೆ ತಂಡಕ್ಕೆ ಗೌರವ ಸನ್ಮಾನ
ಶಿವಮೊಗ್ಗ: ಇನ್ಸ್ಪೈರ್ ಫಿಲಂಸ್ ತಂಡದ ರವಿಚಂದ್ರ ರೈ ಬಿ. ಮುಂಡೂರು ನಿರ್ದೇಶನದ, ಈಗಾಗಲೇ ಪುತ್ತೂರು ಮತ್ತು ಮಂಗಳೂರಿನ ಪ್ರೀಮಿಯರ್ ಷೋಗಳಲ್ಲಿ ಜನರ ಮನ ಗೆದ್ದು ಇತಿಹಾಸ ನಿರ್ಮಿಸಿರುವ ತೆನ್ಕಾಯಿಮಲೆ ಚಿತ್ರದ ಪ್ರೀಮಿಯರ್ ಷೋ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನ ಭಾರತ್ ಸಿನಿಮಾಸ್‌ನಲ್ಲಿ ಜನಭರಿತ ಪ್ರದರ್ಶನದೊಂದಿಗೆ ಯಶಸ್ವಿಗೊಂಡಿತು .

ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಶೆಟ್ಟಿ, ಬಂಟರ ಯಾನೆ ನಾಡವರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಶೆಟ್ಟಿ, ಕೊಲ್ಲಾಪುರದಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ರಂಗನಾಥ, ಜ್ಞಾನ ಗಂಗಾ ವಿದ್ಯಾ ಸಂಸ್ಥೆ ಅಧ್ಯಕ್ಷ ದಿನೇಶ್ ಹಾಗೂ ಮಾನಸ ವಿದ್ಯಾಲಯ ಮುಖೋಪಾಧ್ಯಾಯ ರಾಘವೇಂದ್ರ ಅವರು ನೆರವೇರಿಸಿದರು .

ಚಿತ್ರದ ನಿರ್ದೇಶಕರಾದ ರವಿಚಂದ್ರ ರೈ ಮುಂಡೂರು ಅವರನ್ನು ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಮುಖ್ಯ ರೂವಾರಿ ಸದಾನಂದ ಶೆಟ್ಟಿ, ಮಮತಾ ಸದಾನಂದ ಶೆಟ್ಟಿ , ಅನುಷ ಶೆಟ್ಟಿ, ಅನುಶ್ರೀ ಶೆಟ್ಟಿ, ಪ್ರಭಾಕರ್ ಶೆಟ್ಟಿ ಶಿವಾನಂದ ಶೆಟ್ಟಿ ಹಾಗೂ ಇತರ ಎಲ್ಲಾ ಬಂಧು ಮಿತ್ರರು, ಸಿನಿ ಪ್ರೇಕ್ಷಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನೆರೆದಿದ್ದರು .
ತೆನ್ಕಾಯಿಮಲೆ ಚಿತ್ರ ತಂಡದ ಸದಸ್ಯರು ಚಿತ್ರದ ಸಹಾಯಕ ನಿರ್ದೇಶಕರಾದ ಪ್ರವೀಣ್ ಕುಮಾರ್ ಮುಲಾರ್, ಅಶ್ವಥ್ ಎನ್. ಪುತ್ತೂರು, ಅನುಪ್ತ ರವಿಚಂದ್ರ ರೈ, ಕಾರ್ತಿಕ್ ರೈ ಹಾಗೂ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು.
























