ಪುತ್ತೂರು: ಕಲ್ಲೇಗ ಮಾಡತ್ತಾರುವಿನ ಶ್ರೀ ಪುಣ್ಯ ಕುಮಾರ ಹಾಗೂ ಧರ್ಮದೈವಗಳ ವರ್ಷಾವಧಿ ನೇಮದ ಜನವರಿ 2 ಮತ್ತು 3 ರಂದು ನಡೆಯಲಿದ್ದು, ಪುಣ್ಯಕುಮಾರ ದೈವಸ್ಥಾನ ಚಾವಡಿಯಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಶೇವಿರೆ, ಅಧ್ಯಕ್ಷ ಶ್ರೀಧರ್ ಹೆಗ್ಡೆ ಉಳಿಯ, ಕಾರ್ಯದರ್ಶಿ ಉಮೇಶ್ ಆಚಾರ್ಯ, ಗೌರವಾಧ್ಯಕ್ಷ ಜೀವಂಧರ್ ಜೈನ್, ಮಾಜಿ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ, ಉಪಾಧ್ಯಕ್ಷ ಜೀನಪ್ಪ ಪೂಜಾರಿ ಮುರ, ಖಜಾಂಚಿ ಗಣೇಶ್ ನ್ಯಾಕ್ ಪದ್ಮಡ್ಕ, ಜೊತೆ ಕಾರ್ಯದರ್ಶಿ ಚಂದಪ್ಪ ಕುಲಾಲ್, ಸಮಿತಿಯ ಸದ್ಯಸರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

