ಮಡಿಕೇರಿ: ವಿರಾಜಪೇಟೆಯಲ್ಲಿ ಗೌಡ ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಕೋಟಿ ಬೆಲೆಯ ಜಾಗವನ್ನು ನೀಡಿ ದೊಡ್ಡ ಮಟ್ಟದ ಕೊಡುಗೆ ನೀಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಡಾ. ಕೆ.ವಿ. ಚಿದಾನಂದ್ ಮತ್ತು ಡಾ. ಕೆ.ವಿ. ರೇಣುಕಾಪ್ರಸಾದ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಸ್ಥಾಪಕಾಧ್ಯಕ್ಷ ದಿ. ಡಾ.ಕುರುಂಜಿ ವೆಂಕಟ್ರಮಣ ಗೌಡರು ಜಾಗ ಮತ್ತು ಕಟ್ಟಡವೊಂದನ್ನು ಖರೀಸಿಕೊಟ್ಟಿದ್ದರು. ಆದರೆ ಆ ಜಾಗದ ದಾಖಲೆ ಪತ್ರ ವಿರಾಜಪೇಟೆ ಗೌಡ ಸಮಾಜದ ಹೆಸರಿಗೆ ಆಗಿರಲಿಲ್ಲ. ಆ ಜಾಗ ಡಾ.ಚಿದಾನಂದ್ ಹಾಗೂ ಡಾ.ರೇಣುಕಾಪ್ರಸಾದರ ಹೆಸರಲ್ಲಿತ್ತು. ಈ ಜಾಗವನ್ನು ಇವರಿಬ್ಬರೂ ವಿರಾಜಪೇಟೆಯ ಗೌಡ ಸಮಾಜದ ಹೆಸರಿಗೆ ಕಾನೂನಾತ್ಮಕವಾಗಿ ಬರೆದು ಕೊಟ್ಟಿದ್ದರು.
ಅವರ ಈ ಕೊಡುಗೆಗಾಗಿ ವಿರಾಜಪೇಟೆ ಗೌಡ ಸಮುದಾಯವು ಇಬ್ಬರೂ ಗಣ್ಯರನ್ನು ಸನ್ಮಾನಿಸಿ ಗೌರವಿಸಿತು.
























