ವಿದ್ಯಾರ್ಥಿನಿಗೆ ಕಿರುಕುಳ : ಉಪನ್ಯಾಸಕನ ವಿರುದ್ಧ ಎಫ್‌ಐಆರ್‌

ಹೆಚ್ಚು ಮಾರ್ಕ್‌ ಕೊಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದ ಇಂಜಿನಿಯರಿಂಗ್‌ ಕಾಲೇಜು ಉಪನ್ಯಾಸಕ

ಮೈಸೂರು : ನಗರದ ಪ್ರತಿಷ್ಠಿತ ಇಂಜಿನಿಯರಿಂಗ್​​ ಕಾಲೇಜಿನಲ್ಲಿ ಉಪನ್ಯಾಸಕನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಕೇಸ್‌ ದಾಖಲಾಗಿದೆ. ಹೆಚ್ಚು ಮಾರ್ಕ್ಸ್ ನೀಡ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ. ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಕಿರುಕುಳ ನೀಡಿರುವುದಾಗಿ ವಿದ್ಯಾರ್ಥಿನಿ ದೂರು ನೀಡಿದ್ದು, ಉಪನ್ಯಾಸಕ ಭರತ್ ಭಾರ್ಗವ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಉಪನ್ಯಾಸಕ ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿನಿ ಮಹಿಳಾ ಉಪನ್ಯಾಸಕರ ಬಳಿ ದೂರಿದ್ದಳು. ಈ ವಿಚಾರಕ್ಕೆ ವಿದ್ಯಾರ್ಥಿನಿಗೆ ಕರೆ ಮಾಡಿದ್ದ ಉಪನ್ಯಾಸಕ ಭರತ್ ಭಾರ್ಗವ, ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ತನ್ನ ಖಾಸಗಿ ಅಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ. ಉಪನ್ಯಾಸಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ. ಆಕೆಯ ದೂರಿನ ಅನ್ವಯ ಉಪನ್ಯಾಸಕನ ವಿರುದ್ಧ BNS ಸೆಕ್ಷನ್ 126(2), 75(2), 351(2) ಅಡಿಯಲ್ಲಿ, ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















































 
 
error: Content is protected !!
Scroll to Top