ಕೊನೆಗೂ ಚಿತ್ತಾಪುರದಲ್ಲಿ ನಡೆಯಿತು RSS ಪಥಸಂಚಲನ

ಸ್ವಯಂಸೇವಕರಿಗೆ ಹೂಮಳೆಗೈದ ಜನತೆ

ಚಿತ್ತಾಪುರ: RSS ಪಥ ಸಂಚಲನಕ್ಕೆ ‌ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರೋಧದ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಚಿತ್ತಾಪುರದಲ್ಲಿ ಹೈಕೋರ್ಟ್ ಅನುಮತಿಯೊಂದಿಗೆ ಇಂದು RSS ಗಣವೇಷಧಾರಿಗಳ ಪಥ ಸಂಚಲನ ಯಾವುದೇ ತೊಡಕಿಲ್ಲದೆ ನಡೆದಿದೆ.

ಖಾಕಿ ಸರ್ಪಗಾವಲಿನಲ್ಲಿ ಸುಮಾರು 300 ಮಂದಿ ಸ್ವಯಂಸೇವಕರು, 50 ಮಂದಿ ಘೋಷವಾದಕರು ಯಶಸ್ವಿಯಾಗಿ ಪಥಸಂಚಲನ ನಡೆಸಿದ್ದು, ಇದು ಕಾಂಗ್ರೆಸ್‌ ನಾಯಕರಿಗೆ ಮುಖಭಂಗವಾದಂತಾಗಿದೆ. ಬಜಾಜ್ ಕಲ್ಯಾಣ ಮಂಟಪದಿಂದ ತೊಡಗಿ ಬಸವೇಶ್ವರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ಖಾನಾವಳಿ, ಕೆನರಾ ಬ್ಯಾಂಕ್, ತಾ.ಪಂ. ಕಚೇರಿ ವೃತ್ತವಾಗಿ ಮತ್ತೆ ಬಜಾಜ್ ಕಲ್ಯಾಣ ಮಂಟಪದ ವರೆಗೆ ಈ ಪಥಸಂಚಲನ ‌ನಡೆಯಿತು.





















































 
 

ಪಥಸಂಚಲನದ ಉದ್ದಕ್ಕೂ ದೇಶ ಭಕ್ತ ಗಣವೇಷಧಾರಿ ಸ್ವಯಂಸೇವಕರು ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಸ್ವಯಂಸೇವಕರ ಮೇಲೆ ಸಾರ್ವಜನಿಕರು ಹೂಮಳೆಗೈದರು.

error: Content is protected !!
Scroll to Top