ಜಿತೇಂದ್ರ ದಯಾಮ, ಸೈಮನ್, ಆರ್.ಜಿ.ಮಂಜುನಾಥ ಮತ್ತಿತರರ ವಿರುದ್ಧ ದೂರು
ಬೆಳ್ತಂಗಡಿ: ಎಸ್‌ಐಟಿ ತನ್ನ ಮೇಲೆ ಮಾಡಿ, ಬಲವಂತವಾಗಿ ಹೇಳಿಕೆ ಪಡೆದುಕೊಂಡಿದೆ ಎಂದು ಆರೋಪಿಸಿ ರಾಜ್ಯಪಾಲರು ಮತ್ತು ಪೊಲೀಸ್ ಮಹಾವರಿಷ್ಠರಿಗೆ ದೂರು ನೀಡಿದ್ದ ಜಯಂತ್ ಟಿ. ಈಗ ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ವಿರುದ್ಧವೇ ಬೆಳ್ತಂಗಡಿ ಠಾಣೆಗೆ ಜಯಂತ್ ಟಿ. ದೂರು ನೀಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಎಸ್.ಪಿ. ಸೈಮನ್, ಡಿವೈಎಸ್ಪಿ ಆರ್ ಜಿ. ಮಂಜುನಾಥ, ಇನ್‌ಸ್ಪೆಕ್ಟರ್ ಮಂಜುನಾಥ ಗೌಡ, ಸಬ್‌ಇನ್‌ಸ್ಪೆಕ್ಟರ್ ಗುಣಪಾಲ್
ವಿರುದ್ಧ ದೂರು ನೀಡಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ದೈಹಿಕ ಹಲ್ಲೆ, ಪ್ರಾಣ ಬೆದರಿಕೆ, ಅಪರಾಧಿಕ ಪಿತೂರಿ, ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯ ಹೇರಲಾಗಿದೆ. ಅಲ್ಲದೆ ಕಾನೂನು ಬಾಹಿರ ಕೃತ್ಯಗಳು, ಸರ್ಕಾರಿ ಆದೇಶ ಪಾಲನೆ ಮಾಡದೆ ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ
























